HomePage_Banner
HomePage_Banner
HomePage_Banner
HomePage_Banner

ನ. 15 ರಂದು ಡಾ.ಶಿಶಿಲರ ಆತ್ಮಕಥನ ‘ಬೊಗಸೆ ತುಂಬ ಕನಸು’ ಕೃತಿ ಬಿಡುಗಡೆ

ವಿಶ್ರಾಂತ ಪ್ರಾಂಶುಪಾಲ, ಹಿರಿಯ ಸಾಹಿತಿ ಡಾ.ಬಿ.ಪ್ರಭಾಕರ ಶಿಶಿಲರ ಆತ್ಮಕಥನ ‘ಬೊಗಸೆ ತುಂಬ ಕನಸು’ ಕೃತಿ ನ. 15 ರಂದು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕೆವಿಜಿ ಷಷ್ಠ್ಯಬ್ಧ ಸಭಾಭವನದಲ್ಲಿ ನಡೆಯಲಿದೆ ಎಂದು ನೆಹರೂ ಮೆಮೋರಿಯಲ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ಚಂದ್ರಾಕೋಲ್ಚಾರ್ ಹೇಳಿದ್ದಾರೆ.

ನ. 8ರಂದು ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಕಾರ್ಯಕ್ರಮದ ವಿವರ ನೀಡಿದರು. ಕೃತಿಯನ್ನು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಬಿಡುಗಡೆ ಮಾಡಲಿದ್ದಾರೆ. ದೆಹಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕನ್ನಡ ಪೀಠದ ಸ್ಥಾಪಕಾಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಕೃತಿ ಪರಿಚಯ ಮಾಡಲಿದ್ದಾರೆ.


ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ವಹಿಸಲಿದ್ದಾರೆ. ಉಜಿರೆ ಎಸ್‌ಡಿಎಂಸಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಮುಖ್ಯ ಅತಿಥಿಗಳಾಗಿರುತ್ತಾರೆ. ಅಕಾಡೆಮಿ ನಿರ್ದೇಶಕರುಗಳಾದ ಶ್ರೀಮತಿ ಶೋಭಾ ಚಿದಾನಂದ ಮತ್ತು ಆರ್ಕಿಟೆಕ್ಟ್ ಅಕ್ಷಯ ಕುರುಂಜಿ ಉಪಸ್ಥಿತರಿರುವರು. ಎಂದು ಅವರು ಹೇಳಿದರು.

ಹಿರಿಯ ವಿದ್ಯಾರ್ಥಿಗಳ ಮಹಾಸಂಗಮ
ಬೆಳಿಗ್ಗೆ ಕೃತಿ ಬಿಡುಗಡೆ ನಡೆಯಲಿದ್ದು, ಮಧ್ಯಾಹ್ನ ಹಿರಿಯ ವಿದ್ಯಾರ್ಥಿಗಳ ಮಹಾಸಂಗಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿಚಾರ ವಿನಿಮಯ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದಲ್ಲದೆ ೨೦೨೬ರಲ್ಲಿ ನಡೆಯಲಿರುವ ಕಾಲೇಜಿನ ಸುವರ್ಣ ಮಹೋತ್ಸವದ ನೀಲಿ ನಕಾಶೆಯ ಬಗ್ಗೆ ಪ್ರಸ್ತಾವನೆ ನಡೆಯುವುದು ಎಂದು ಅವರು ತಿಳಿಸಿದರು.
೨೧೦ ಪುಸ್ತಕ ಬರೆದ ಶಿಶಿಲರು
ಡಾ.ಪ್ರಭಾಕರ ಶಿಶಿಲರು ಸೇವೆಗೆ ಸೇರಿದ್ದು ೧೯೭೭ರಲ್ಲಿ. ೪೦ ವರ್ಷಗಳ ಅವಧಿಯಲ್ಲಿ ೨೧೦ ಪುಸ್ತಕಗಳನ್ನು ಬರೆದಿದ್ದಾರೆ. ಇವುಗಳಲ್ಲಿ ೧೬೭ ಅರ್ಥಶಾಸ್ತ್ರ ಕೃತಿಯಾದರೆ, ೪೩ ಸೃಜನಶೀಲ ಸಾಹಿತ್ಯ ಕೃಷಿ. ೧೬೭ರ ಅರ್ಥಶಾಸ್ತ್ರ ಕೃತಿಗಳಲ್ಲಿ ೧೫ ಆಂಗ್ಲಭಾಷೆಗಳಲ್ಲಿವೆ. ೧೫೨ ಕೃತಿ ಕನ್ನಡ ಮಾಧ್ಯಮದಲ್ಲಿದೆ. ಆಂಗ್ಲಭಾಷಾ ಕೃತಿಗಳು ಭಾರತ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಅವಲೋಕನ ಕೃತಿಗಳಾಗಿವೆ. ಕನ್ನಡ ಮಾಧ್ಯಮದ ಕೃತಿಗಳು ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಪಠ್ಯಪುಸ್ತಕದ ಕೃತಿಗಳಾಗಿವೆ. ಶಿಶಿಲರ ಸೃಜನಶೀಲ ಕೃತಿಗಳು ಕೂಡಾ ಭಾರೀ ಸದ್ದು ಮಾಡಿದ್ದು ಇವರ ಯುರೋಪ್ ಪ್ರವಾಸ ಕಥನ ದೇಶ ಯಾವುದಾದರೇನು? ಗೋರೂರು ಮತ್ತು ವಿಶ್ವೇಶ್ವರಯ್ಯ ಪ್ರಶಸ್ತಿ ಪಡೆದಿವೆ. ಕಪಿಲಹಳ್ಳಿಯ ಕಥೆಗಳು ಕೃತಿ ಅಕ್ಷರಶ್ರೀ ಮತ್ತು ಸಾಹಿತ್ಯಶ್ರೀ ಪ್ರಶಸ್ತಿಗೆ ಭಾಜನರಾಗಿದೆ. ಮಹಾಭಾರತ ಆಧರಿಸಿ ಬರೆದ ಪುಂಸ್ತ್ರೀ ಕಾದಂಬರಿಗೆ ಕುವೆಂಪು ಮತ್ತು ಪುಟ್ಟರಾಜ ಗವಾಯಿ ಪ್ರಶಸ್ತಿ ಬಂದದಲ್ಲದೆ ೧೪ ಭಾಷೆಗಳಿಗೆ ಅನುವಾದಗೊಂಡಿದೆ. ಮಹಾಭಾರತ ಆಧಾರಿತ ಕಾದಂಬರಿ ಮತ್ಸ್ಯಗಂಧಿ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಗಳಿಸಿದ್ದಲ್ಲದೆ ೫ ಭಾಷೆಗಳಿಗೆ ಅನುವಾದಗೊಂಡಿದೆ. ಕೊಡಗಿನ ಇತಿಹಾಸದ ಆಧಾರದಲ್ಲಿ ಇವರು ರಚಿಸಿದ ನದಿ ಎರಡರ ನಡುವೆ ಮಾಸ್ತಿ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಪುರಸ್ಕಾರ ಪಡೆದಿದೆ. ಇವರ ದೊಡ್ಡವೀರ ರಾಜೇಂದ್ರ ಕಾದಂಬರಿ ಕನ್ನಡ ವಿಮರ್ಷಾ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಗಿರಿಧರ ಗೌಡ, ವಿಶ್ರಾಂತ ಪ್ರಾಂಶುಪಾಲ ಡಾ. ಬಿ. ಪ್ರಭಾಕರ ಶಿಶಿಲ, ಉಪನ್ಯಾಸಕರುಗಳಾದ ಡಾ.ಪೂವಪ್ಪ ಕಣಿಯೂರು, ಶ್ರೀಮತಿ ರತ್ನಾವತಿ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕೆ.ಟಿ.ವಿಶ್ವನಾಥ್, ಪದದಾಧಿಕಾರಿಗಳಾದ ಡಾ.ಅನುರಾಧಾ ಕುರುಂಜಿ, ಭವಾನಿಶಂಕರ ಅಡ್ತಲೆ, ಸುಧಾಕರ ರೈ ಪಿ.ಬಿ., ಆನಂದ ಖಂಡಿಗ, ರಜತ್ ಅಡ್ಕಾರ್ ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.