HomePage_Banner
HomePage_Banner

ಕುತೂಹಲ ಸೃಷ್ಟಿಸಿದ ನೆಲ್ಲೂರು ಕೆಮ್ರಾಜೆ ಸೊಸೈಟಿ ಅಧ್ಯಕ್ಷ ಚುನಾವಣೆ

ಅಧ್ಯಕ್ಷರಾಗಿ ವಿಷ್ಣು ಭಟ್ ಮೂಲೆತೋಟ ಮತ್ತೆ ಆಯ್ಕೆ

ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ 2  ಮತಗಳ ಗೆಲುವು

ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದು ಮಾಜಿ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟರವರು ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಡ್ಡ ಮತದಾನವಾದ ಹಿನ್ನೆಲೆಯಲ್ಲಿ ಎಲ್ಲಾ ೧೭ ಮಂದಿ ಪ್ರತಿನಿಧಿಗಳು ರಾಜೀನಾಮೆ ನೀಡಬೇಕೆಂದು ಪಕ್ಷದ ಮಂಡಲ ಸಮಿತಿ ಸೂಚಿಸಿತ್ತು. ಪಕ್ಷದ ಸೂಚನೆಯಂತೆ ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಿಷ್ಣು ಭಟ್ ಆರಂಭದಲ್ಲೇ ರಾಜೀನಾಮೆ ಸಲ್ಲಿಸಿದ್ದರು. ಕೆಲವು ಸಮಯದ ಬಳಿಕ ಮತ್ತೆ ಕೆಲವು ಸೊಸೈಟಿಗಳ ಅಧ್ಯಕ್ಷರುಗಳು ರಾಜೀನಾಮೆ ನೀಡಿದ್ದರು. ನಿಯಮಬದ್ಧವಾಗಿ ರಾಜೀನಾಮೆ ಸಲ್ಲಿಸಿದ ಮೂವರ ರಾಜೀನಾಮೆಯಷ್ಟೇ ಅಂಗೀಕಾರಗೊಂಡಿತ್ತು.
ತೆರವಾಗಿದ್ದ ಅಧ್ಯಕ್ಷ ಸ್ಥಾನದ ಚುನಾವಣೆಯು ಇಂದು ಸೊಸೈಟಿ ಆವರಣದಲ್ಲಿ ನಡೆಯಿತು. ಬಹುತೇಕ ನಿರ್ದೇಶಕರ ಒತ್ತಾಸೆಯ ಮೇರೆಗೆ ವಿಷ್ಣು ಭಟ್ ಅವರೇ ಅಧ್ಯಕ್ಷತೆಗೆ ನಾಮಪತ್ರ ಸಲ್ಲಿಸಿದ್ದರು. ಆದರೆ ಮತ್ತೊಬ್ಬರನ್ನು ಅಧ್ಯಕ್ಷತೆಗೆ ಸ್ಪರ್ಧಿಸಲು ಮಂಡಲ ಸಮಿತಿ ಮುಖಂಡರು ತೀರ್ಮಾನಿಸಿದ್ದರೆನ್ನಲಾಗಿದೆ. ಉಪಾಧ್ಯಕ್ಷರಾಗಿದ್ದ ಮಹೇಶ್ ಗಟ್ಟಿಗಾರು ಉಪಾಧ್ಯಕ್ಷತೆಗೆ ರಾಜೀನಾಮೆ ನೀಡಿದ್ದರು.
ಇಂದು ಬೆಳಿಗ್ಗೆ ಪಕ್ಷದ ಮಂಡಲ ಸಮಿತಿ ಸವಿನ್ ಕೊಡಪಾಲರವರನ್ನು ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಯಾಗಿ ಆಯ್ಕೆ ಮಾಡಿತು. ಇದರಿಂದ ವಿಷ್ಣು ಭಟ್ ಅವರ ಪರವಾಗಿದ್ದವರು ಅಸಮಾಧಾನಗೊಂಡರೆನ್ನಲಾಗಿದೆ. ಈ ಹಿನ್ನಲೆಯಲ್ಲಿ ಅವರ ಒತ್ತಾಯಕ್ಕೆ ವಿಷ್ಣು ಭಟ್ ಅವರು ಕಣದಲ್ಲಿ ಉಳಿದರು. ಚುನಾವಣೆ ನಡೆದಾಗ ವಿಷ್ಣು ಭಟ್ ಮೂಲೆತೋಟರಿಗೆ ೬ ಮತಗಳು ಹಾಗೂ ಸವಿನ್ ಅವರಿಗೆ ೪ ಮತಗಳು ಲಭಿಸಿತು. ವಿಷ್ಣು ಭಟ್ ಅಧ್ಯಕ್ಷರಾಗಿ ಮತ್ತೆ ಆಯ್ಕೆಗೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.