HomePage_Banner
HomePage_Banner

ವೃದ್ದೆಯ ಕಾಲಲ್ಲಿ ಹುಳ : ಸುಬ್ರಹ್ಮಣ್ಯ ಪ್ರಾಥಮಿಕ ಚಿಕಿತ್ಸಾಲಯದಲ್ಲಿ ಚಿಕಿತ್ಸೆ

 

ಪರ್ವತಮುಖಿ ಫ್ರೆಂಡ್ಸ್ ತಂಡದ ರವಿಕಕ್ಕೆಪದವು ಅವರಿಂದ ಮಾನವೀಯ ನೆರವು

ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಅಲೆದಾಡಿಕೊಂಡಿದ್ದು ನೋವಿನಿಂದ ಬಳಲುತಿದ್ದ 6೦ ವರ್ಷದ ಅನಾಥ ವೃದ್ದೆಗೆ ಪರ್ವತಮುಖಿ ಫ್ರೆಂಡ್ಸ್ ತಂಡದವರು ಚಿಕಿತ್ಸೆ ಕೊಡಿಸಿದ ಘಟನೆ ನ.6 ರಂದು ನಡೆದಿದೆ.

ಮೂಲತಃ ಸಕಲೇಶಪುರ ಅರೆಹಳ್ಳಿ ಲಕ್ಕುಂದ ನಿವಾಸಿ ಸವಿತಾ ಎಂದು ಹೇಳಿಕೊಂಡಿದ್ದ ವೃದ್ದೆ ಕಳೆದ 15 ದಿವಸಗಳಿಂದ ಸುಬ್ರಹ್ಮಣ್ಯ ಆಸುಪಾಸಿನಲ್ಲಿ ಅಲೆದಾಡುತಿದ್ದರು. ಈ ವೃದ್ದೆ ಮೂರು ತಿಂಗಳಿನಿಂದ ಪಂಜದಲ್ಲಿ ಅಲೆದಾಡುತಿದ್ದು ಇತ್ತಿಚಿನ ದಿನಗಳ ಹಿಂದೆ ಯಾರೋ ಸುಬ್ರಹ್ಮಣ್ಯ ಕ್ಕೆ ಬಸ್ ಹತ್ತಿಸಿದ್ದರು ಎನ್ನಲಾಗಿದೆ. ನ.5 ರಂದು ಸುಬ್ರಮಣ್ಯ ರಿಕ್ಷಾ ಚಾಲಕರು ಪರ್ವತಮುಖಿ ಫ್ರೆಂಡ್ಸ್ ತಂಡದ ರವಿಕಕ್ಕೆಪದವು ಅವರಿಗೆ ಅನಾಥ ವೃದ್ದೆ ಯೊಬ್ಬರು ಕಾಲು ನೋವಿನಿಂದ ಬಳಲುತಿರುವುದು, ಕಾಲಿನ ಪಾದದಲ್ಲಿ ಹುಳ ಆಗಿರುವ ಬಗ್ಗೆ ಮಾಹಿತಿ ನೀಡಿದ್ದರು.

ಅವರು ತಕ್ಷಣ ವೃದ್ದೆಯ ಬಳಿ ತೆರಳಿ ಕಾಲಿಗಾದ ಗಾಯವನ್ನು ನೋಡಿದಾಗ ದಂಗಾಗಿದ್ದರು. ಎಡ ಕಾಲಿನ ಪಾದದಡಿಯಲ್ಲಿ ಗಾಯವಾಗಿದ್ದು ಅದು ಕೊಳೆತು ಹುಳವಾಗಿತ್ತು. ಅಲ್ಲದೆ ಕಾಲಿನಿಂದ ಹುಳಗಳು ಕೆಳಗೆ ಬೀಳುತಿತ್ತು. ಕೂಡಲೆ ಅವರನ್ನು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದು ಅಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಅಲ್ಲಿ ಗಾಯದ ಹುಳವನ್ನು ತೆಗೆದು ಔಷಧಿ ಹಾಕಿ ಬ್ಯಾಂಡೇಜ್ ಮಾಡಲಾಯಿತು. ಬಳಿಕ ಆ ವೃದ್ದೆ ಕೊಟ್ಟ ಮಾಹಿತಿಯಂತೆ ಅವರ ಮನೆಯನ್ನು ಹುಡುಕಿಕೊಂಡು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯದ ಅಂಬ್ಯುಲೆನ್ಸ್ ನಲ್ಲಿ ಅವರ ಮನೆಗೆ ಹುಡುಕಲು ಹೋಗಲಾಯಿತು. ಆದರೆ ವೃದ್ದೆ ತಿಳಿಸಿದಲ್ಲಿ ಅವರ ಮನೆ ಇಲ್ಲದಾಗಿ ಅವರನ್ನು ಮತ್ತೆ ಕಡಬ ತಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಯಿತು.

ಬಳಿಕ ವೃದ್ದೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ಕಳುಹಿಸಿ ಅಲ್ಲಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿದೆ. ವೃದ್ದೆಯನ್ನು ನೋಡಿಕೊಳ್ಳಲೆಂದು ರವಿಕಕ್ಕೆಪದವು ಅವರು ಬೇರೊಂದು ಮಹಿಳೆಯನ್ನು ಕಳುಹಿಸಿ ಕೊಟ್ಟಿದ್ದಾರೆ. ಈ ಎಲ್ಲಾ ವ್ಯವಸ್ಥೆಗೆ ರವಿಕಕ್ಕೆಪದವು ಅವರು ಈಗಾಗಲೇ 5 ಸಾವಿರಕ್ಕೂ ಮೇಲ್ಪಟ್ಟು ಹಣ ವ್ಯಯಿಸಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕ ಉಮ್ಮರ್ ಖಾನ್ ಮತ್ತು ಡಿ ಗ್ರೂಪ್ ನೌಕರ ಸುಂದರ ಚಿಕಿತ್ಸೆ ನೀಡಿದ್ದು, ಸುಬ್ರಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ತ್ರಿಮೂರ್ತಿ ಕಡಬ, ಪುತ್ತೂರು, ಮಂಗಳೂರಿನಲ್ಲಿ ಚಿಕಿತ್ಸೆಯ ವ್ಯವಸ್ಥೆ ಮಾಡಿಸಿದ್ದರು. ಪಿಡಿಒ ಮುತ್ತಪ್ಪ, ಗ್ರಾ.ಪಂ ಸದಸ್ಯ ಮೋಹನದಾಸ ರೈ, ಗಿರಿಧರ ಸ್ಕಂದ, ಜಯಂತ ಮತ್ತಿತರರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.