HomePage_Banner
HomePage_Banner

ವಿದ್ಯಾರಶ್ಮಿಯ ವಿದ್ಯಾರ್ಥಿಗಳಿಗೆ ಎಲ್.ಐ.ಸಿ.ಯ ಪ್ರಶಸ್ತಿ

ಪುತ್ತೂರಿನ ಜೀವವಿಮಾ ನಿಗಮವು ನೀಡುವ “ವರ್ಷದ ವಿದ್ಯಾರ್ಥಿ” ಪ್ರಶಸ್ತಿಯನ್ನು ವಿದ್ಯಾರಶ್ಮಿ ವಿದ್ಯಾಲಯದ 1ರಿಂದ 10ನೆ ತರಗತಿಯ ಹತ್ತು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಗರಿಷ್ಠ ಅಂಕಗಳ ಆಧಾರದಲ್ಲಿ ನೀಡಲಾಗುವ ಈ ಪ್ರಶಸ್ತಿ ವಿತರಣ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಸವಣೂರು ಕೆ. ಸೀತಾರಾಮ ರೈ ವಹಿಸಿದ್ದರು. ಮಾತನಾಡುತ್ತಾ ಅವರು ಜೇವವಿಮೆ ಎಂಬುದು ಜೀವನಾವಶ್ಯಕವಾದ ವಿಚಾರವಾಗಿದ್ದು ಎಲ್ಲೈಸಿಯವರು ವಿದ್ಯಾರ್ಥಿಗಳನ್ನು ಪ್ರಶಸ್ತಿ ನೀಡಿ ಗೌರವಿಸಿದ್ದು ಸ್ತುತ್ಯರ್ಹ ಎಂದರು.
ಎಲ್ಲೈಸಿಯ ಪುತ್ತೂರು ಶಾಖಾ ಪ್ರಬಂಧಕ ಗುರುರಾಜ್ ಅವರು ಮಾತನಾಡಿ ಈ ಪ್ರಶಸ್ತಿಗೆ ಭಾಜನವಾದ ಮೊದಲ ಶಾಲೆ ವಿದ್ಯಾರಶ್ಮಿಯಾಗಿದೆ ಎಂದು ಹೇಳಿ ಅಭಿನಂದಿಸಿದರು.
ಎಲ್ಲೈಸಿಯ ಮುಖ್ಯ ಸಲಹಾಗಾರರಾದ ಪ್ರಭಾಕರ್ ಆಳ್ವ ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹಕವಾಗಿ ವೈಯಕ್ತಿಕ ನೆಲೆಯಲ್ಲಿ ಪ್ರಶಸ್ತಿ ವಿಜೇತರಿಗೆ ನಗದು ಬಹುಮಾನ ನೀಡುವುದಾಗಿ ಘೋಷಿಸಿದರು.
ಪ್ರಾಂಶುಪಾಲ ಸೀತಾರಾಮ ಕೇವಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ವಿಜೇತರ ಪಟ್ಟಿ ವಾಚಿಸಿದರು. ಸಾಕ್ಷಿ ಮತ್ತು ಬಳಗದವರು ಪ್ರಾರ್ಥಿಸಿದರು. ವಿದಿತ್ ಕಿಶನ್ ಸ್ವಾಗತಿಸಿ ಅತೀಕ್ಷ್ ಶೆಟ್ಟಿ ವಂದಿಸಿದರು. ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.