HomePage_Banner
HomePage_Banner

ಜಾಲ್ಸೂರು ಗ್ರಾಮ ಪಂಚಾಯತ್ ವಿಶೇಷ ಗ್ರಾಮಸಭೆ

ಜಾಲ್ಸೂರು ಗ್ರಾಮ ಪಂಚಾಯತ್ ನ 2020-21ನೇ ಸಾಲಿನಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳಲಿರುವ ಸಬ್ ಕಿ ಯೋಜನಾ ಸಬ್ ಕಾ ವಿಕಾಸ್ ಜನಪರ ಯೋಜನೆಯ ನಮ್ಮ ಗ್ರಾಮ ನಮ್ಮ ಯೋಜನೆ ಮತ್ತು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕ್ರಿಯಾ ಯೋಜನೆ ತಯಾರಿಸುವ ಬಗ್ಗೆ ವಿಶೇಷ ಗ್ರಾಮಸಭೆಯು ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಎಸ್.ನಾಯಕ್ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಭವನದಲ್ಲಿ ನ.7ರಂದು ಜರುಗಿತು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ ಅವರು ಗ್ರಾಮಸಭೆಯ ಮೇಲ್ವಿಚಾರಣಾ ಅಧಿಕಾರಿಯಾಗಿ ಉಪಸ್ಥಿತರಿದ್ದರು. ಸಭೆಯಲ್ಲಿ ಗ್ರಾಮದ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸಿ, ಕಾಮಗಾರಿಗಳ ಪಟ್ಟಿ ತಯಾರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ.ಕಾರ್ಯದರ್ಶಿ ಪಿ.ಬಿ. ಸುಬ್ಬಯ್ಯ, ಉಪಾಧ್ಯಕ್ಷ ದಿನೇಶ ಅಡ್ಕಾರು, ಸದಸ್ಯರುಗಳಾದ ಭಾಸ್ಕರ ಗೌಡ ಹೊಸಗದ್ದೆ, ಶ್ರೀಮತಿ ಶಶಿಕಲಾ ರೈ ಬೇಲ್ಯ, ಸುಬ್ಬಯ್ಯ ನಾಯರ್ ಹಿತ್ಲು, ಪ್ರವೀಣ ಪಿಲಿಕೋಡಿ, ಕೆ.ಪಿ.ಭುವನೇಂದ್ರ ಬೊಳುಬೈಲು, ಶ್ರೀಮತಿ ಕವಿತ ನೆಕ್ರಾಜೆ, ಶ್ರೀಮತಿ ಜಯಶೀಲ ಅಡ್ಕಾರುಪದವು, ಶ್ರೀಮತಿ ಗುಲಾಬಿ ಕೋನಡ್ಕಪದವು, ಎ.ಆರ್.ಬಾಬು ಅಡ್ಕಾರು, ಶ್ರೀಮತಿ ಲತಾಕುಮಾರಿ ಅಡ್ಕಾರು, ಶ್ರೀಮತಿ ಶೃತಿಕಾ ಅಡ್ಕಾರು, ಎಸ್.ಜನಾರ್ದನ ಆಚಾರ್ಯ ಜಾಲ್ಸೂರು, ಶ್ರೀಮತಿ ರುಕ್ಮಿಣಿ ಕದಿಕಡ್ಕ, ಶ್ರೀಮತಿ ಅಂಬಿಕಾ ಮಹಾಬಲಡ್ಕ, ದಯಾನಂದ ಮಹಾಬಲಡ್ಕ  ಉಪಸ್ಥಿತರಿದ್ದರು. ಗ್ರಾಮ ಪಂಚಾಯತಿ ಸಿಬ್ಬಂದಿಗಳು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.