HomePage_Banner
HomePage_Banner

ಯುಸುಗೌ ಪಾರ್ಥಿವ ಶರೀರ ವಿದ್ಯಾನಗರದ ಮನೆಗೆ

ಗುತ್ತಿಗಾರಿನ ಮನೆಯಲ್ಲಿ ಅಪರಾಹ್ನ ಅಂತ್ಯಕ್ರಿಯೆ
ಇಂದು ಬೆಳಿಗ್ಗೆ ನಿಧನರಾದ ನಿವೃತ್ತ ಪ್ರಾಂಶುಪಾಲ, ಸಾಹಿತಿ ಯು.ಸುಬ್ರಾಯ ಗೌಡ ಅವರ ಪಾರ್ಥಿವ ಶರೀರವನ್ನು ಸುಳ್ಯದ ವಿದ್ಯಾನಗರದಲ್ಲಿರುವ ಅವರ ನಿವಾಸಕ್ಕೆ ತರಲಾಗಿದ್ದು, ನೂರಾರು ಮಂದಿ ಅಂತಿಮ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ.


ಪಾರ್ಥಿವ ಶರೀರವನ್ನು ಅಪರಾಹ್ನ ಗುತ್ತಿಗಾರಿನ ಉಂಞನದಲ್ಲಿರುವ ಅವರ ಮೂಲ ಮನೆಗೆ ಕೊಂಡೊಯ್ದು ಅಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.
೬೧ ವರ್ಷ ಪ್ರಾಯದ ಯು.ಸುಬ್ರಾಯ ಗೌಡರು ಸವಣೂರು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾಗಿರುವ ಪತ್ನಿ ಶ್ರೀಮತಿ ಪದ್ಮಾವತಿ, ಪುತ್ರ ಮನ್ವಿತ್ ಮತ್ತು ಪುತ್ರಿ ಮಹಿಮಾರನ್ನು ಅಗಲಿದ್ದಾರೆ.


ಶಿಕ್ಷಣ ಕ್ಷೇತ್ರದಲ್ಲಷ್ಟೇ ಅಲ್ಲದೆ ಸಾಹಿತ್ಯ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಯುಸುಗೌ ಸಕ್ರಿಯರಾಗಿದ್ದರು. ಹಲವಾರು ಮೌಲಿಕ ಕೃತಿಗಳನ್ನು ಹೊರತಂದಿದ್ದಾರೆ. ಸ್ವಂತಿಕಾ ಸಾಹಿತ್ಯ ಬಳಗ, ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಹಲವು ಸಾಹಿತ್ಯ ಸಂಘಟನೆಗಳಲ್ಲಿ ದುಡಿದಿದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.