ವಿಜಯಪುರ-ಮಂಗಳೂರು ರೈಲಿಗೆ ನೆಟ್ಟಣದಲ್ಲಿ ಸ್ವಾಗತ

Advt_Headding_Middle
Advt_Headding_Middle
Advt_Headding_Middle

ನೆಟ್ಟಣ ರೈಲು ನಿಲ್ದಾಣಕ್ಕೆ ಆಗಮಿಸಿದ ವಿಜಯಪುರ-ಮಂಗಳೂರು ಸೂಪರ್ ಫಾಸ್ಟ್ ರೈಲಿಗೆ ಸುಬ್ರಹ್ಮಣ್ಯ ರೋಡ್‌ನ ನೆಟ್ಟಣ ರೈಲು ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ರೈಲಿಗೆ ಹೂ ಹಾರ ಹಾಕಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಗುರುಪಾದ ಬೆಳ್ಳಿಅಂಗಡಿ, ಸುರೇಶ್ ಭಟ್.ಬಿ, ಉದಯ ಕುಮಾರ್ ನೂಚಿಲ, ಪತ್ರಿಕಾ ಏಜಂಟ್ ಬಸವರಾಜ್, ಪರಮೇಶ್, ಶಂಕರ, ಮಂಜು, ಸಂತೋಷ್, ಕರಿಬಸವ ಉಪಸ್ಥಿತರಿದ್ದರು.


ವಿಜಯಪುರದಿಂದ ಮಂಗಳೂರು ಸಂಪರ್ಕಿಸಲು ಮತ್ತು ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಮೊದಲಾದ ಕರಾವಳಿಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಿಗೆ ಸಂದರ್ಶಿಸಲು ಈ ರೈಲು ವಿಶೇಷ ಅನುಕೂಲತೆ ಒದಗಿಸಿದೆ. ಸಂಜೆ 6 ಗಂಟೆಗೆ ವಿಜಯಪುರದಿಂದ ಹೊರಡಲಿರುವ ರೈಲು ಬಸವನ ಬಾಗೇವಾಡಿ, ಆಲಮಟ್ಟಿ, ಬಾಗಲಕೋಟೆ, ಗದಗ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಅರಸಿಕೆರೆ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಪುತ್ತೂರು ಮೂಲಕ ಮರುದಿನ ಮಧ್ಯಾಹ್ನ12.4೦ಕ್ಕೆ ಮಂಗಳೂರು ತಲುಪಲಿದೆ.ಅದೇ ರೀತಿ ಮಂಗಳೂರಿನಿಂದ ಸಂಜೆ 4.3೦ಕ್ಕೆ ಹೊರಟು ಮರುದಿನ ಬೆಳಗ್ಗೆ 11.45 ಕ್ಕೆ ವಿಜಯಪುರ ತಲುಪಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.