HomePage_Banner
HomePage_Banner

ಐನೆಕಿದು ಶಾಲೆಗೆ ಪ್ರವೇಶ ದ್ವಾರ ಉದ್ಘಾಟನೆ

 ಶಿಕ್ಷಕಿ ಜಯಲಕ್ಷ್ಮಿ ಅವರಿಗೆ ಬೀಳ್ಕೊಡುಗೆ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಐನೆಕಿದು ಇಲ್ಲಿನ ಪ್ರವೇಶ ದ್ವಾರ ಉದ್ಘಾಟನೆ, ವರ್ಗಾವಣೆ ಗೊಂಡ ಶಿಕ್ಷಕಿಗೆ ಬೀಳ್ಕೊಡುಗೆ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ ದತ್ತಿನಿಧಿ ಸಮಾರಂಭ, ಸನ್ಮಾನ ಇಂದು ನಡೆಯಿತು.


ಕಿಶೋರ್ ಕುಮಾರ್ ಕೂಜುಗೋಡು ಕೊಡಮಾಡಿದ ಶಾಲಾ ದ್ವಾರವನ್ನು ಶಿಕ್ಷಕಿ ಜಯಲಕ್ಷ್ಮಿ ಉದ್ಘಾಟಿಸಿದರು. ಸಭಾ ಕಾರ್ಯಕ್ರಮವನ್ನು ಕಿಶೋರ್ ಕುಮಾರ್ ಕೂಜುಗೋಡು ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಹರಿಹರ ಪಲ್ಲತಡ್ಕ ಗ್ರಾ.ಪಂ ಅಧ್ಯಕ್ಷ ಹಿಮ್ಮತ್ ಕೆ.ಸಿ ವಹಿಸಿದ್ದರು. ವೇದಿಕೆಯಲ್ಲಿ ಐನೆಕಿದು ಶಾಲೆಯಲ್ಲಿ ಸುಮಾರು 17 ವರ್ಷಗಳ ಕಾಲ ಶಿಕ್ಷಕಿಯಾಗಿದ್ದು ಇದೀಗ ಚಿತ್ರದುರ್ಗ ಕ್ಕೆ ವರ್ಗಾವಣೆಗೊಂಡಿರುವ ಜಯಲಕ್ಷ್ಮಿ ಅವರನ್ನು ಗೌರವಿಸಲಾಯಿತು.

ದತ್ತಿನಿಧಿ ದಾನಿ ಸತೀಶ್ ಕೂಜುಗೋಡು, ಐನೆಕಿದು ಶಾಲಾ ಮಕ್ಕಳ ಸಂರಕ್ಷಣಾ ಸಮಿತಿ ಸದಸ್ಯ ಸೋಮಸುಂದರ ಕೂಜುಗೋಡು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಯರಾಮ ಕಟ್ರಮನೆ, ನಿವೃತ್ತ ಶಿಕ್ಷಕ, ದತ್ತಿನಿಧಿ ದಾನಿ ಸೀತಾರಾಮ ಕಟ್ಟೆಮನೆ, ದತ್ತಿನಿಧಿ ದಾನಿ ಉಷಾ ಭವಾನಿಂಕರ್ ಪಿಂಡಿಮನೆ, ಭವಾನಿಶಂಕರ ಪಿಂಡಿಮನೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಕೂಜುಗೋಡು, ನಿಸರ್ಗ ಯುವಕ ಮಂಡಲ ಅಧ್ಯಕ್ಷ ರಮೇಶ್ ಕೋನಡ್ಕ, ದತ್ತಿನಿಧಿ ದಾನಿ ಶ್ರೀಧರ ಅಂಙಣ, ಹರಿಹರ ಪಲ್ಲತಡ್ಕ ಗ್ರಾ.ಪಂ ಸದಸ್ಯರುಗಳಾದ ನವೀನ್ ಕಟ್ರಮನೆ, ಪಾರ್ವತಿ ಪೈಲಾಜೆ, ರತ್ನಾವತಿ ನವಗ್ರಾಮ, ವಿದ್ಯಾರ್ಥಿ ನಾಯಕ ಪುನಿತ್ ಉಪಸ್ಥಿತರಿದ್ದರು. ಸಹ ಶಿಕ್ಷಕಿ ಕುಮಾರಿ ಸ್ವಾಗತಿಸಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ವೇದಾವತಿ ವಂದಿಸಿದರು. ಲೋಹಿತ್ ಮತ್ತು ಸರಿತಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಾದ ವಿದ್ಯಾಶ್ರೀ, ದೇವಿಕಾ, ಹಳೆ ವಿದ್ಯಾರ್ಥಿ ಲೋಹಿತ್ ಅಭಿಪ್ರಾಯ ವ್ಯಕ್ತಪಡಿಸಿದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.