HomePage_Banner
HomePage_Banner

ತೊಡಿಕಾನ ಶಾಲೆಗೆ ದಾನಿಗಳಿಂದ ಕೊಡುಗೆ

ಉದ್ಘಾಟನೆ ಮತ್ತು ಅಭಿನಂದನಾ ಕಾರ್ಯಕ್ರಮ

ತೊಡಿಕಾನ ಉನ್ನತೀಕರಿಸಿದ ಹಿ.ಪ್ರಾ . ಶಾಲೆಗೆ ದಾನಿಗಳು ನೀಡಿದ ವಿವಿಧ ಕೊಡುಗೆಗಳ ಉದ್ಘಾಟನೆ ಮತ್ತು ಅಭಿನಂದನಾ ಕಾರ್ಯಕ್ರಮ ನ.14 ರಂದು ಶಾಲೆಯಲ್ಲಿ ನಡೆಯಿತು.
ಸಂತೋಷ್ ಕುತ್ತಮೊಟ್ಟೆಯವರು ಅರಂತೋಡು – ತೊಡಿಕಾನ ಸೊಸೈಟಿ ಮೂಲಕ ಕೊಡುಗೆಯಾಗಿ ನೀಡಿದ ಜೆರಾಕ್ಸ್ ಮಿಷಿನ್ನನು ಶ್ರೀಮತಿ ಪೂಜಾ ಸಂತೋಷ್ ಉದ್ಘಾಟಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನುದಾನ ಹಾಗೂ ಊರವರ ಸಹಕಾರದಿಂದ ಖರೀದಿಸಿದ ಮೈಕ್ ಸೆಟ್ ನ್ನು ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ದಮಯಂತಿ ಬಾಳೆಕಜೆ ಉದ್ಘಾಟಿಸಿದರು. ವಸಂತ ಭಟ್ ತೊಡಿಕಾನ ಹಾಗೂ ಊರವರು ಕೊಡುಗೆಯಾಗಿ ನೀಡಿದ ಇನ್ವರ್ಟರ್ ನ್ನು ವಸಂತ ಭಟ್ ತೊಡಿಕಾನ ಉದ್ಘಾಟಿಸಿದರು.


ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ತಿಮ್ಮಯ್ಯ ಮೆತ್ತಡ್ಕ ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ಸುಶೀಲ ಪಂಜಿಕೋಡಿ, ರವೀಂದ್ರ ಪೂಜಾರಿ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ವಾಣಿ ಚಿಟ್ಟನ್ನೂರು ವೇದಿಕೆಯಲ್ಲಿದ್ದರು.


ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸುನೀತ ಸ್ವಾಗತಿಸಿದರು. ಸಹ ಶಿಕ್ಷಕರಾದ ಸ್ನೇಹಲತಾ ಹಾಗೂ ಬಾಲರಾಜ್ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.