HomePage_Banner
HomePage_Banner
HomePage_Banner
HomePage_Banner

ನ. 18-19 ರಂದು ಖ್ಯಾತ ವಾಗ್ಮಿ ವಲಿಯುದ್ದೀನ್ ಫೈಝಿ  ಪಾಜಪಳ್ಳಕ್ಕೆ

 

ಸುಳ್ಯ: ಸುಳ್ಯ ತಾಲೂಕಿನ ಚರಿತ್ರೆ ಪ್ರಸಿದ್ಧ ಮುಹಿಯುದ್ದೀನ್ ಜುಮಾ ಮಸೀದಿ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮಿನ್ನತುಲ್ ಹುದಾ ಇದರ ಪಂಚವಾರ್ಷಿಕ ಸಲುವಾಗಿ ಮಾಹೇ ಮದೀನಾ ಈದ್ ಮೀಲಾದ್ ,ಸ್ವಲಾತ್ ವಾರ್ಷಿಕ ನವಂಬರ್ 18 ಹಾಗೂ 19 ರಂದು ಎರಡು ದಿವಸಗಳ ಮತಪ್ರಭಾಷಣ ನಡೆಯಲಿರುವುದು.

ಈ ಕಾರ್ಯಕ್ರಮದ ಸಭಾಧ್ಯಕ್ಷ ತೆಯನ್ನು ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಪಿ ಇಸಾಕ್ ಸಾಹೇಬ್ ಪಾಜಪಳ್ಳ ವಹಿಸಲಿದ್ದು ,ಮಸೀದಿ ಖತೀಬ ಯಾಸರ್ ಅರಫಾತ್ ಕೌಸರಿ ಉದ್ಘಾಟಿಸಲಿದ್ದಾರೆ.ಈ ಕಾರ್ಯ ಕ್ರಮದಲ್ಲಿ ವಿವಿಧ ಸಾಮಾಜಿಕ ಶೈಕ್ಷಣಿಕ ನಾಯಕರು , ಉಲಮಾ ಉಮಾರ ನಾಯಕರು ಭಾಗವಹಿಸಲಿದ್ದಾರೆ. ಎರಡು ದಿವಸಗಳ ಕಾಲ ನಡೆಯುವ ಕಾರ್ಯಕ್ರಮವು ಮಯ್ಯತ್ ಪರಿಪಾಲನೆ ವಿಷಯ ಕುರಿತು ಕೇರಳದ ಹೆಸರಾಂತ ಪ್ರಭಾಷಣ ಗಾರ ಖ್ಯಾತ ವಾಗ್ಮಿ ವಲಿಯುದ್ದೀನ್ ಫೈಝಿ ಕೋಝಿಕ್ಕೋಡ್ ಪ್ರಭಾಷಣ ನಡೆಸಲಿರುವರು. ಎಲ್ ಇ ಡಿ ಸ್ಕ್ರೀನ್ ಅಳವಡಿಸುವುದರೊಂದಿಗೆ ಕ್ಲಿಪ್ಪಿಂಗ್ ಸಹಿತ ಪ್ರಭಾಷಣ ನಡೆಯಲಿರುವುದು, ಸ್ತ್ರೀ ಯರಿಗೆ ಪ್ರತ್ಯೇಕ ಸ್ಥಳವಕಾಶ ಇರಲಿದೆ ಎಂದು ಕಾರ್ಯಕ್ರಮ ಸಂಯೋಜಕರಾದ ಕೆ ಎಂ ಇಕ್ಬಾಲ್ ಬಾಳಿಲ ಪತ್ರಿಕಾ ಪ್ರಕಟನೆಗೆ ತಿಳಿಸಿರುತ್ತಾರೆ .

ಈ ಸಂದರ್ಭದಲ್ಲಿ ಮಿನ್ನತುಲ್ ಹುದಾ ಪ್ರಧಾನ ಕಾರ್ಯದರ್ಶಿ ಶರೀಫ್ ಪಿ ಎ ಫ್ರಂಟ್ ಲೈನ್ ,ಪ್ರಧಾನ ಕಾರ್ಯದರ್ಶಿ ಫಾರೂಕ್ ,ರಝಾಕ್ ಅತ್ತಿಕ್ಕರಮಜಲು, ಜಮಾಅತ್ ಪ್ರಧಾನ ಕಾರ್ಯದರ್ಶಿ ಖಲೀಲ್ ಅಯ್ಯನ ಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.