HomePage_Banner
HomePage_Banner

ಎಣ್ಮೂರಿನಲ್ಲಿ ಬಂಟರ ಸಂಘದ ಆಶ್ರಯದಲ್ಲಿ ಸಮಾವೇಶ, ಸನ್ಮಾನ, ಬಾಳಿಲದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

 

ಸುಳ್ಯ ತಾಲ್ಲೂಕು ಬಂಟರ ಸಂಘ ಬಾಳಿಲ ವಲಯ ಇದರ ಆಶ್ರಯದಲ್ಲಿ ಎಣ್ಮೂರು ಸರಕಾರಿ ಶಾಲೆಯಲ್ಲಿ ಡಿ.೨೯ರಂದು ಬಂಟರ ಸಮಾವೇಶ ಮತ್ತು ಸ್ವಜಾತಿ ಸಾಧಕರಿಗೆ ಸನ್ಮಾನ, ಡಿ.೨೫ರಂದು ವಲಯ ಮಟ್ಟದ ಕ್ರಿಕೆಟ್ ಪಂದ್ಯಾಟ ಹಾಗೂ ಡಿ.೨೨ರಂದು ಕ್ರೀಡಾಕೂಟ ನಡೆಯಲಿದ್ದು ವಿವಿಧ ಗಣ್ಯರು ಭಾಗವಹಿಸಲಿರುವರು.
ನ.೧೭ರಂದು ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ನಡೆದ ಸಮಲೋಚನಾ ಸಭೆಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ತಾಲೂಕು ಸಮಿತಿ ಗೌರವ ಸಲಹೆಗಾರರಾದ ಕೇನ್ಯ ರವೀಂದ್ರನಾಥ ಶೆಟ್ಟಿ ಕಾರ್ಯಕ್ರಮದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ನಿವೃತ್ತ ಬ್ಯಾಂಕ್ ಅಧಿಕಾರಿ ನಾರಾಯಣ ರೈ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.
ತಾಲೂಕು ಸಮಿತಿ ಉಪಾಧ್ಯಕ್ಷ ದಯಾಕರ ಆಳ್ವ ಕುಂಬ್ರ ಎಲ್ಲರ ಸಹಕಾರ ಕೋರಿದರು.
ವೇದಿಕೆಯಲ್ಲಿ ತಾಲ್ಲೂಕು ಸಮಿತಿ ಉಪಾಧ್ಯಕ್ಷ ಪ್ರಭಾಕರ ರೈ ಎನ್.ಜಿ., ಪ್ರಧಾನ ಕಾರ್ಯದರ್ಶಿ ಸುಭಾಷ್ ಚಂದ್ರ ರೈ ತೋಟ, ವಲಯಾಧ್ಯಕ್ಷೆ ಪ್ರವೀಣಾ ರೈ, ಕಾರ್ಯದರ್ಶಿ ನಳಿನಿ ರೈ ಎಣ್ಮೂರು, ಗೌರವಾಧ್ಯಕ್ಷೆ ಪುಷ್ಪಾವತಿ ರೈ ನಾಲ್ಗುತ್ತು ಉಪಸ್ಥಿತರಿದ್ದರು. ಬಾಳಿಲ ವಲಯ ಯುವ ಘಟಕಾಧ್ಯಕ್ಷ ಸುಜಿತ್ ರೈ ಪಟ್ಟೆ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ಪ್ರಸ್ತಾವನೆಗೈದರು ಮಾಡಿಲ ಕಾರ್ಯದರ್ಶಿ ಎನ್.ಜಿ. ಲೋಕನಾಥ ರೈ ವಂದಿಸಿದರು.

 

 

 


 

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.