HomePage_Banner
HomePage_Banner

ಭಾಗಮಂಡಲದಲ್ಲಿ ಸುಲಿಗೆ : ಇಬ್ಬರು ಸುಳ್ಯ ನಿವಾಸಿಗಳ ಬಂಧನ

ದಿನಾಂಕ 24-11-2019 ರಂದು ಮಧ್ಯಾಹ್ನ ಸಮಯ 3-15 ಗಂಟೆಗೆ ಭಾಗಮಂಡಲ ತಲಕಾವೇರಿ ರಸ್ತೆಯಲ್ಲಿರುವ ಶ್ರೀನಿವಾಸ್ ಕೂರ್ಗ್ ಔಟ್ಲೆಟ್ಸ್, ಸ್ಪೈಸಸ್ ಅಂಗಡಿಗೆ ಇಬ್ಬರು ಅಪರಿಚಿತರು ನಂಬರ್ ಪ್ಲೇಟ್ ಇಲ್ಲದ ಸ್ಕೂಟಿಯಲ್ಲಿ ವೈನ್ ಖರೀದಿಸುವ ನೆಪದಲ್ಲಿ ಬಂದು ಒಳಗಡೆ ಪ್ರವೇಶಿಸಿ ಅಂಗಡಿಯಲ್ಲಿ ಇದ್ದ ಶ್ರೀಮತಿ ಪೂಜಾರವರ ಕುತ್ತಿಗೆಗೆ ಕೈಹಾಕಿ 30 ಸಾವಿರ ರೂ. ಬೆಲೆ ಬಾಳುವ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಅಲ್ಲಿದ್ದ ಮೊಬೈಲ್ ಫೋನ್ ಸಮೇತ ಪರಾರಿಯಾಗಿದ್ದು, ಈ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಮೊ.ಸಂ 49/2019  ಕಲಂ392 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.


ಪ್ರಕರಣದಲ್ಲಿ ಆರೋಪಿಗಳ ಪತ್ತೆ ಬಗ್ಗೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಡಾ|| ಸುಮನ್ ಡಿ. ಪನ್ನೇಕರ್ ರವರ ಮಾರ್ಗದರ್ಶನದಲ್ಲಿ ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ ದಿನೇಶ್ ಕುಮಾರ್ ಹಾಗೂ ಮಡಿಕೇರಿ ಗ್ರಾಮಾಂತರ ವೃತ್ತದ ಸಿಪಿಐ, ದಿವಾಕರ ಇವರ ನೇತೃತ್ವದಲ್ಲಿ ತಂಡವನ್ನು ರಚಿಸಿ ಪತ್ತೆ ಕಾರ್ಯಕ್ಕೆ ನೇಮಿಸಲಾಗಿತ್ತು. ಸದರಿ ಪತ್ತೆದಳದ ಅಧಿಕಾರಿ ಮತ್ತು ಸಿಬ್ಬಂದಿಯವರು ಘಟನೆ ನಡೆದು 24 ಗಂಟೆಯ ಒಳಗಾಗಿ ಅಪರಿಚಿತ ಆರೋಪಿಗಳ ಪತ್ತೆ ಬಗ್ಗೆ ಮಾಹಿತಿ ಸಂಗ್ರಹಿಸಿ ಆರೋಪಿಗಳಾದ ೧) ಕೆ.ಎಂ.ನವಾಜ್ ತಂದೆ ಮೊಹಿದ್ದೀನ್ ಕುಟ್ಟಿ, ಪ್ರಾಯ ೨೮ ವರ್ಷ, ಮೀನು ಮಾರಾಟ ವಾಸ ಗಾಂಧಿನಗರ, ಸುಳ್ಯ, ಸ್ವಂತ ಊರು ಅಡಿಮಾಲಿ, ಇಡುಕಿ ಜಿಲ್ಲೆ, ಕೇರಳ ರಾಜ್ಯ ೨) ಸಿ.ಇ.ಉಮ್ಮರ್ ತಂದೆ ಅಹಮ್ಮದ್, ಪ್ರಾಯ ೩೦ ವರ್ಷ ಮರಕೆಲಸ ವಾಸ ಜಟ್ಟಿಪಳ್ಳ, ಸುಳ್ಯ ಸ್ವಂತ ಊರು ಕಾಂಞಂ ಗಾಡ್, ಕಾಸರಗೋಡು ಜಿಲ್ಲೆ ರವರನ್ನು ದಿನಾಂಕ ೨೫-೧೧-೨೦೧೯ ರಂದು ರಾತ್ರಿ ೭-೦೦ ಗಂಟೆಗೆ ಸುಳ್ಯ ಬಸ್ಸು ನಿಲ್ದಾಣದಲ್ಲಿ ಪತ್ತೆ ಹಚ್ಚಿದ್ದು ಆರೋಪಿಗಳು ಸುಲಿಗೆ ಮಾಡಿದ ಮಾಂಗಲ್ಯಸರ, ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ ಟಿವಿಎಸ್ ಇನ್ಟಾಕರ್ ಸ್ಕೂಟಿಯನ್ನು ವಶಪಡಿಸಿಕೊಂಡಿದ್ದಾರೆ. ಘಟನೆ ನಡೆದು ೨೮ ಗಂಟೆ ಒಳಗಾಗಿ ಅಪರಿಚಿತ ಆರೋಪಿಗಳನ್ನು ಮಾಲು ಸಮೇತ ಪತ್ತೆ ಹಚ್ಚಿದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರವರು ಶ್ಲಾಘಿಸಿ ಬಹುಮಾನವನ್ನು ಘೋಷಿಸಿರುತ್ತಾರೆ. ಪತ್ತೆ ಕಾರ್ಯದಲ್ಲಿ ಸಿ.ಎನ್.ದಿವಾಕರ್ ಸಿಪಿಐ, ಹೆಚ್.ಕೆ ಮಹದೇವ ಪಿಎಸ್‌ಐ ಭಾಗಮಂಡಲ ಪೊಲೀಸ್ ಠಾಣೆ, ಸಿಬ್ಬಂದಿಯವರಾದ ಉತ್ತಯ್ಯ ಎಎಸ್‌ಐ, ಮುಖ್ಯಪೇದೆ ಇಬ್ರಾಹಿಂ, ಕಾಳಿಯಪ್ಪ, ಪ್ರೇಂಕುಮಾರ್, ಹರೀಶ್ , ಶಿವರಾಂ, ನಾಗೇಶ್, ಪುನಿತ್, ನಂಜುಂಡ, ಪರಮೇಶ್, ಚಾಲಕರಾದ ನಾಗರಾಜು, ಮತ್ತು ಅಯ್ಯಪ್ಪ ಇವರು ಭಾಗಿಯಾಗಿರುತ್ತಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.