HomePage_Banner
HomePage_Banner
Breaking News

ಸಂಪಾಜೆ ಗ್ರಾ.ಪಂ. ಮಕ್ಕಳ ಗ್ರಾಮಸಭೆ

ಸಂಪಾಜೆ ಗ್ರಾಮ ಪಂಚಾಯತ್‌ನ ಮಕ್ಕಳ ಗ್ರಾಮಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಂದರಿ ಮುಂಡಡ್ಕರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಕ್ಕಳ ಗ್ರಾಮಸಭೆಯ ಅಧ್ಯಕ್ಷತೆಯನ್ನು ಶಾಲಾ ನಾಯಕ ಆಶ್ರಯ ದತ್ತ ವಹಿಸಿದರು. ನೋಡೆಲ್ ಅಧಿಕಾರಿಯಾಗಿ ಗೋಪಾಲಕೃಷ್ಣ ಬನ ಇವರು ಆಗಮಿಸಿದರು. ಮಕ್ಕಳ ಆರೋಗ್ಯಕರ ಬೆಳವಣಿಗೆ ಹಾಗೂ ಪೌಷ್ಠಿಕ ಆಹಾರದ ಬಗ್ಗೆ ಶ್ರೀಮತಿ ಹಿಮಲೇಶ್ವರಿ ಮಾಹಿತಿ ನೀಡಿದರು. ಮಕ್ಕಳ ಬೌಧ್ದಿಕ ಬೆಳವಣಿಗೆ ಹಾಗೂ ಅಂಗನವಾಡಿ ಇನ್ನಿತರ ವಿಷಯಗಳ ಬಗ್ಗೆ ಶಿಸು ಅಭಿವೃದ್ದಿ ಯೋಜನಾಧಿಕಾರಿ ಶ್ರೀಮತಿ ರವಿಶ್ರೀ ಮಾಹಿತಿ ನೀಡಿದರು.
ಶಾಲಾ ಮಕ್ಕಳಿಂದ ಆಟೋಟ, ಕ್ರೀಢಾ ಸಾಮಾಗ್ರಿಗಳನ್ನು ದೊರಕಿಸಿಕೊಡುವಂತೆ ಬೇಡಿಕೆ ನೀಡಿದರು. ಶಾರದಾ ಶಾಲಾ ಮಕ್ಕಳು ಶೌಚಾಲಯದ ಬಗ್ಗೆ ಹಾಗೂ ಕಸದ ತೊಟ್ಟಿಯ ಬಗ್ಗೆ ಕೋರಿಕೆ ಮಂಡಿಸಿದರು. ಇದಕ್ಕೆ ಗ್ರಾಮ ಪಂಚಾಯತ್‌ನಿಂದ ದೊರಕಿಸಿಕೊಡುವ ಬಗ್ಗೆ ಭರವಸೆ ನೀಡಲಾಯಿತು. ವಿವಿಧ ಶಾಲೆಗಳಿಂದ ಹಲವು ಬೇಡಿಕೆಗಳು ಬಂದಿದ್ದು, ಅದನ್ನು ಹಂತ ಹಂತವಾಗಿ ಪರಿಹರಿಸಲಾಗುವುದೆಂದು ಗ್ರಾಮ ಪಂಚಾಯತ್ ಅಧ್ಯಕ್ಷರು ಭರವಸೆ ನೀಡಿದರು. ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಪುಷ್ಪಾ ಮೇದಪ್ಪ, ಗ್ರಾಮ ಪಂಚಾಯತ್ ಸದಸ್ಯರಾದ ನಾಗೇಶ್ ಪಿ.ಆರ್ ಜಿ.ಕೆ.ಹಮೀದ್, ಷಣ್ಮುಗಂ ಹಾಗೂ ಪಿ.ಡಿ.ಓ ನಾಗರಾಜ್ ಉಪಸ್ಥಿತರಿದ್ದರು. ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಯಮುನಾ ಬಿ.ಎಸ್. ಉಪಸ್ಥಿತರಿದ್ದರು. ಲೆಕ್ಕ ಸಹಾಯಕರಾದ ಶ್ರೀಮತಿ ಅನಿತಾ ಸ್ವಾಗತಿಸಿ, ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು. ಹಾಗೂ ಪಂಚಾಯತ್ ಸಿಬ್ಬಂದಿಗಳಾದ ಶ್ರೀಮತಿ ಗೋಪಮ್ಮ, ಶ್ರೀಮತಿ ಮಧುರಾ, ಶ್ರೀ ಭರತ್ ಮತ್ತು ಉಮೇಶ್ ಎಂ.ಆರ್. ಹಾಜರಿದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.