HomePage_Banner
HomePage_Banner

ಕೂಜುಗೋಡು ಪಟೇಲ್ ನಾಗಪ್ಪ ಗೌಡ ನಿಧನ

 

ನಾಳೆ ಬೆಳಿಗ್ಗೆ ಕೂಜುಗೋಡಿನಲ್ಲಿ ಅಂತ್ಯ ಸಂಸ್ಕಾರ

ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಕೂಜುಗೋಡು ನಾಗಪ್ಪ ಗೌಡರು ಇಂದು ಸಂಜೆ ನಿಧನರಾಗಿದ್ದಾರೆ.

 

ಪ್ರತಿಷ್ಠಿತ ಕೂಜುಗೋಡು ಮನೆತನದವರಾದ ನಾಗಪ್ಪ ಗೌಡರು ಇತ್ತೀಚೆಗಷ್ಟೇ ನೂರು ವರ್ಷಗಳನ್ನು ಪೂರೈಸಿದ್ದರು. ಮೃತರು ಪುತ್ರರಾದ ಕಿಶೋರ್ ಕುಮಾರ್ ಕೂಜುಗೋಡು, ಡಾ. ಉದಯಕುಮಾರ್ ಕೂಜುಗೋಡು, ದೇವದಾಸ್ ಕೂಜುಗೋಡು, ಪುತ್ರಿಯರಾದ ಶ್ರೀಮತಿ ಲೀಲಾವತಿ ಮುದ್ದಾಜೆ, ಶ್ರೀಮತಿ ಸುನೀತಾ ಮೂಲೆಮಜಲು ಅವರನ್ನು ಅಗಲಿದ್ದಾರೆ.
ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ್ದ ನಾಗಪ್ಪ ಗೌಡರು ಆ ಬಳಿಕ ಊರಿಗೆ ಬಂದು ಪ್ರಗತಿಪರ ಕೃಷಿಕರಾಗಿದ್ದರು.
ಮೃತರ ಅಂತ್ಯಸಂಸ್ಕಾರವು ಆದಿತ್ಯವಾರ ಬೆಳಿಗ್ಗೆ ಕೂಜುಗೋಡಿನಲ್ಲಿ ನಡೆಯಲಿದೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.