ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯದ ಬ್ರಹ್ಮ ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಕ್ಷಣಗಣನೆ ಆರಂಭವಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಚಂಪಾ ಷಷ್ಠಿ ಮಹೋತ್ಸವದ ಅಂಗವಾಗಿ ಬ್ರಹ್ಮರಥೋತ್ಸವ ಇದೀಗ ಬೆಳಿಗ್ಗೆ 8.14ರ ಧನುರ್ಲಗ್ನದ ಶುಭಮುಹೂರ್ತದಲ್ಲಿ ನಡೆಯಲಿದೆ. ಇದಕ್ಕೂ ಮೊದಲು ಮುತ್ತಪ್ಪ ರೈ ದೇರ್ಲ ಹಾಗೂ ಅಜಿತ್ ಶೆಟ್ಟಿ ಕಡಬರವರು ಕಾಣಿಕೆಯಾಗಿ ನೀಡಿರುವ ನೂತನ ಬ್ರಹ್ಮ ರಥ ಸಮರ್ಪಣೆ ಕಾರ್ಯ ನಡೆಯಲಿದೆ.
ಸಾವಿರಾರು ಮಂದಿ ಭಕ್ತರು ನೂತನ ಬ್ರಹ್ಮರಥೋತ್ಸವವನ್ನು ಕಣ್ತುಂಬಿಕೊಳ್ಳಲು ಕುಕ್ಕೆ ಕ್ಷೇತ್ರದತ್ತ ಧಾವಿಸುತ್ತಿದ್ದಾರೆ.
ಚಂಪಾ ಷಷ್ಠಿಯ ನೇರಪ್ರಸಾರ ವೀಕ್ಷಿಸಿ