HomePage_Banner
HomePage_Banner
Breaking News

ಪೈಚಾರಿನಿಂದ ಸೋಣಂಗೇರಿ ಚತುಷ್ಪಥ ರಸ್ತೆ

ಪೈಚಾರಿನಿಂದ ಸೋಣಂಗೇರಿವರೆಗೆ ಚತುಷ್ಪಥ ರಸ್ತೆ ನಿರ್ಮಾಣದ ಪ್ರಸ್ತಾಪವನ್ನು ಲೋಕೋಪಯೋಗಿ ಇಲಾಖೆಯು ಸರಕಾರಕ್ಕೆ ಸಲ್ಲಿಸಿದ್ದು ಆಡಳಿತಾತ್ಮಕ ಮಂಜೂರಾತಿ ದೊರೆತ ಕೂಡಲೇ ಟೆಂಡರ್ ಕರೆಯಲಾಗುವುದೆಂದು ತಿಳಿದು ಬಂದಿದೆ.
ಈಗ ಮೊದಲ ಹಂತದಲ್ಲಿ 5 ಕೋಟಿ ರೂ.ಗಳಿಗೆ ಎಸ್ಟಿಮೇಟ್ ರಚಿಸಲಾಗಿದೆ. ಅದರಲ್ಲಿ ಪೈಚಾರಲ್ಲಿ ಜಂಕ್ಷನ್‌ಗೆ ವಿಶಾಲವಾಗಿ ಡಾಮರೀಕರಣ ಮಾಡುವುದು, ಮಧ್ಯದಲ್ಲಿ ವೃತ್ತ ನಿರ್ಮಿಸುವುದು 1.4 ಕಿ.ಮೀ. ಉದ್ದಕ್ಕೆ ಚತುಷ್ಪಥ ರಸ್ತೆ ನಿರ್ಮಾಣ – ಅಂದರೆ ನಡುವೆ ಡಿವೈಡರ್ ಆ ಕಡೆ ಈ ಕಡೆ ತಲಾ 5.5 ಮೀಟರ್ ಅಗಲದ ಡಾಮರು ರಸ್ತೆ ನಿರ್ಮಿಸಲಾಗುತ್ತದೆ. ಇದು ಹೊಸಗದ್ದೆ ಏರುವರೆಗೆ ಬರಲಿದೆ.
ಮುಂದಕ್ಕೆ ಇನ್ನೊಂದು 5 ಲಕ್ಷದ ಯೋಜನೆ ತಯಾರಿಸಿ ಹೊಸ ಗದ್ದೆ ಏರಿನಿಂದ ಸೋಣಂಗೇರಿ ಜಂಕ್ಷನ್ ವರೆಗೆ ಹಾಗೂ ಅಲ್ಲಿಂದ ಜಾಲ್ಸೂರು, ಬೆಳ್ಳಾರೆ, ಗುತ್ತಿಗಾರು ರಸ್ತೆಗಳಲ್ಲಿ ತಲಾ 1೦೦ ಮೀಟರ್‌ನಷ್ಟು ಉದ್ದಕ್ಕೆ ಚತುಷ್ಪಥ ಮಾಡುವ ಪ್ರಸ್ತಾಪ ಇದೆಯೆಂದು ತಿಳಿದು ಬಂದಿದೆ.
ಸೋಣಂಗೇರಿ ಸಮೀಪ ಹೊಸಗದ್ದೆ ತಿರುವು ಬಳಿ ರಸ್ತೆ ಕುಸಿದಿದ್ದು, ಅಲ್ಲಿ ಮುಂದಿನ ಯೋಜನೆಗೆ ಪೂರಕವಾಗುವಷ್ಟು ಅಗಲವಾಗಿ ಕಾಂಕ್ರೀಟ್ ತಡೆಗೋಡೆ ನಿರ್ಮಿಸುವುದಕ್ಕಾಗಿ 3೦ ಮೀಟರ್ ಉದ್ದದ ತಡೆಗೋಡೆ ಕಾಮಗಾರಿ 5೦ ಲಕ್ಷ ರೂ.ಗಳ ಎಸ್ಟಿಮೇಟ್ ಕಳುಹಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಣ್ಣೇಗೌಡರು ತಿಳಿಸಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.