HomePage_Banner
HomePage_Banner
Breaking News

ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ನೀಡಿ : ದುರ್ಗಾವಾಹಿನಿ ಆಗ್ರಹ


ಭಾರತದಲ್ಲಿ ಅತ್ಯಾಚಾರಿಗಳಿಗೆ ಶಿಕ್ಷೆ ನೀಡುವ ಕಾನೂನು ದುರ್ಬಲವಾಗಿದ್ದು, ಘಟನೆ ನಡೆದ ೩ ತಿಂಗಳ ಒಳಗೆ ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸುವಂತಹ ಕಾನೂನು ರೂಪಿಸಬೇಕೆಂದು ಕೇಂದ್ರ ಸರಕಾರವನ್ನು ವಿಶ್ವ ಹಿಂದೂ ಪರಿಷತ್ ಮತ್ತು ದುರ್ಗಾವಾಹಿನಿ ಒತ್ತಾಯಿಸಿದೆ.

ಹೈದರಾಬಾದ್‌ನಲ್ಲಿ ನಡೆದ ಪಶುವೈದ್ಯ ಡಾ.ಪ್ರಿಯಾಂಕ ರೆಡ್ಡಿಯವರ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಘಟನೆಯನ್ನು ಖಂಡಿಸಿ ಇಂದು ತಾಲೂಕು ಕಚೇರಿ ಮುಂಭಾಗದಲ್ಲಿ ನಡೆಸಿದ ಪ್ರತಿಭಟನಾ ಸಭೆಯನ್ನುದ್ಧೇಶಿಸಿ ದುರ್ಗಾವಾಹಿನಿಯ ಸಂಚಾಲಕಿ ಶ್ರೀಮತಿ ವಿದ್ಯಾ ರಾವ್ ಈ ಒತ್ತಾಯವನ್ನು ಮಾಡಿದರು.

 


ವಿಹಿಂಪ ತಾಲೂಕು ಅಧ್ಯಕ್ಷ ಗಣಪತಿ ಭಟ್ ಮಾತನಾಡಿದರು. ಬಳಿಕ ಪ್ರತಿಭಟನಾಕಾರರು ರಾಷ್ಟ್ರಪತಿಗಳಿಗೆ ಕಳುಹಿಸುವ ಮನವಿಯನ್ನು ತಹಶೀಲ್ದಾರ್‌ರಿಗೆ ಅರ್ಪಿಸಲಾಯಿತು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.