HomePage_Banner
HomePage_Banner
Breaking News

ಇಬ್ರಾಹಿಂ ಗೂನಡ್ಕ ಪದ ಸ್ವೀಕಾರಕ್ಕೆ ಮುಖ್ಯಮಂತ್ರಿ ತಡೆ

ಉಳ್ಳಾಲ ಸಯ್ಯದ್ ಮದನಿ ದರ್ಗಾದ ಆಡಳಿತಾಧಿಕಾರಿಯಾಗಿ ನೇಮಕಗೊಂಡು ಅಧಿಕಾರ ಸ್ವೀಕರಿಸಬೇಕಿದ್ದ ಇಬ್ರಾಹಿಂ ಗೂನಡ್ಕರವರ ಅಧಿಕಾರ ಸ್ವೀಕಾರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ತಾತ್ಕಾಲಿಕ ತಡೆ ನೀಡಿದ್ದಾರೆ.


ಉಳ್ಳಾಲ ದರ್ಗಾದ ಆಡಳಿತಾಧಿಕಾರಿಯಾಗಿ ವಕ್ಫ್ ಬೋರ್ಡ್‌ನಿಂದ ನೇಮಕಗೊಂಡಿರುವ ನಿವೃತ್ತ ಸರಕಾರಿ ಅಧಿಕಾರಿ ಇಬ್ರಾಹಿಂ ಗೂನಡ್ಕರವರು ನ. 22 ರಂದು ಅಧಿಕಾರ ಸ್ವೀಕರಿಸಲು ಹೋದಾಗ ದರ್ಗಾ ಸಮಿತಿಯ ಅಧ್ಯಕ್ಷರು ಇಲ್ಲವೆಂಬ ಕಾರಣ ನೀಡಿ ಅವರನ್ನು ವಾಪಾಸ್ ಕಳುಹಿಸಲಾಗಿತ್ತು. ಆ ಬಳಿಕ ಮಂಗಳೂರು ಎಸಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆದು ಡಿ. ೨ರಂದು ಇಬ್ರಾಹಿಂರಿಗೆ ಅಧಿಕಾರ ಹಸ್ತಾಂತರಿಸಬೇಕೆಂದು ತೀರ್ಮಾನವಾಗಿತ್ತು. ಆದರೆ ಡಿ. ೨ರಂದು ಆಡಳಿತಾಧಿಕಾರಿ ನೇಮಕದ ವಿರುದ್ಧದ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆಗಿದ್ದುದರಿಂದ ಡಿ. ೨ ಮತ್ತು ೩ರಂದು ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳದಿರಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಡಿ. ೩ರಂದು ಹೈಕೋರ್ಟ್ ಆಡಳಿತಾಧಿಕಾರಿ ನೇಮಕಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿತು. ಇದರಿಂದಾಗಿ ಆಡಳಿತಾಧಿಕಾರಿ ಅಧಿಕಾರ ವಹಿಸಿಕೊಳ್ಳುವ ಹಾದಿ ಸುಗಮವಾಗಿತ್ತು. ಆದರೆ ಮಂಗಳೂರಿನ ಖಾಜಿ ತ್ವಾಖಾ ಮುಸ್ಲಿಯಾರ್‌ರವರ ನೇತೃತ್ವದ ನಿಯೋಗ ಮುಖ್ಯಮಂತ್ರಿ ಯಡಿಯೂರಪ್ಪರವರನ್ನು ಕಂಡು ಇಬ್ರಾಹಿಂ ಗೂನಡ್ಕರವರು ಅಧಿಕಾರ ಸ್ವೀಕರಿಸುವುದನ್ನು ತಡೆಯಬೇಕೆಂದು ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಹೇಳಿ ತಾತ್ಕಾಲಿಕ ತಡೆ ನೀಡಿದ್ದಾರೆ.
ಡಿ.೩ರಂದು ಬೆಂಗಳೂರಿನಲ್ಲಿದ್ದ ನಿಯೋಜಿತ ಆಡಳಿತಾಧಿಕಾರಿ ಇಬ್ರಾಹಿಂ ಗೂನಡ್ಕರವರು ಡಿ. ೪ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಸುನ್ನಿ ನೇತಾರರು ಅವರಿಗೆ ಪುಷ್ಪಗುಚ್ಛ ನೀಡಿ ಸ್ವಾಗತ ಕೋರಿದ್ದರು. ಆದರೆ ಅಧಿಕಾರ ಸ್ವೀಕಾರಕ್ಕೆ ಮುಖ್ಯಮಂತ್ರಿಗಳೇ ತಡೆಯಾಜ್ಞೆ ನೀಡಿರುವುದರಿಂದ ಇಬ್ರಾಹಿಂ ಗೂನಡ್ಕರವರು ಉಳ್ಳಾಲ ದರ್ಗಾದ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸುವುದು ಮುಂದಕ್ಕೆ ಹೋದಂತಾಗಿದೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.