HomePage_Banner
HomePage_Banner
Breaking News

ಎಡಮಂಗಲದಲ್ಲಿ ಕಳ್ಳತನ – ಪೊಲೀಸ್ ದೂರು

 

ಎಡಮಂಗಲದ ಮನೆಯೊಂದರಿಂದ ಕಳವಾದ ಘಟನೆ ಡಿ.5 ರಂದು ನಡೆದಿದೆ.
ಎಡಮಂಗಲದ ಮುಳ್ಯಮನೆ ಸವಿತಾ ಎಂಬವರ ಮನೆಯಿಂದ ರೂ.55,000 ಕಳವಾಗಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಸವಿತರವರು ಬೆಳಿಗ್ಗೆ ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದರು.
ಮನೆಯೊಳಗೆ ಕಪಾಟಿನಲ್ಲಿ ಸ್ವಸಹಾಯ ಸಂಘದಿಂದ ಸಾಲ ಮಾಡಿ ರೂ.55,000 ತಂದಿಟ್ಟಿದ್ದರು.
ಈ ಹಣವನ್ನು ಯಾರೋ ಕಳ್ಳರು ಮನೆಯ ಹಿಂಬದಿಯಿಂದ ಇಟ್ಟಿಗೆ ಗೋಡೆಯ ಇಟ್ಟಿಗೆ ತೆಗೆದು ಮನೆಯೊಳಗೆ ಒಳಪ್ರವೇಶಿಸಿ ಕದ್ದಿದ್ದರು.

ಸಂಜೆ ಮನೆಯವರು ಮನೆಗೆ ಬಂದಾಗ ಕಪಾಟಿನಲ್ಲಿ ಹಣ ಕಳವಾದ ಘಟನೆ ಬೆಳಕಿಗೆ ಬಂದಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದರು.ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.