HomePage_Banner
HomePage_Banner
Breaking News

ಗುರುಂಪುನಿಂದ-ನಾಗಪಟ್ಟಣದವರೆಗೆ ಇನ್ನೂ ಆರಂಭಗೊಳ್ಳದ ರಸ್ತೆ ಹೊಂಡ ಮುಚ್ಚುವ ಕಾಮಗಾರಿ

 

ನಗರ ಪಂಚಾಯತ್ ಎದುರು ನಾಗರಿಕರ ಪ್ರತಿಭಟನೆ

15 ದಿನಗಳೊಳಗೆ ರಸ್ತೆ ಕಾಮಗಾರಿ ಆರಂಭಗೊಳಿಸುತ್ತೇವೆ ಎಂದು ಭರವಸೆ ನೀಡಿದ ನ.ಪಂ
ಅಧಿಕಾರಿಗಳು ಇನ್ನೂ ಕಾಮಗಾರಿ ಆರಂಭಿಸದಿರುವ ಹಿನ್ನಲೆಯಲ್ಲಿ ನ.ಪಂ. ವಿರುದ್ಧ ನಗರ ಪಂಚಾಯತ್ ಮುಂಭಾಗ ನಾಗರಿಕರ ಪ್ರತಿಭಟನೆ ನಡೆಯಿತು.

 

ಪ್ರತಿಭಟನೆ ಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈಯವರು “ಕಳೆದ ಬಾರಿ ಸೇತುವೆ ಬಳಿ ಪ್ರತಿಭಟನೆ ನಡೆಸಿದಾಗ 15 ದಿನದಲ್ಲಿ ಗುರುಂಪಿನಿಂದ ನಾಗಪಟ್ಟಣದವರೆಗಿನ ರಸ್ತೆ ಹೊಂಡ ಮುಚ್ಚುವ ಕಾಮಗಾರಿ ನಡೆಸುವ ಭರವಸೆ ನಡೆಸಿದರೂ ಆರಂಭಿಸಿಲ್ಲ. ನಾವು ಗ್ರಾಮಸ್ಥರ ಜತೆ ಸೇರಿ ರಸ್ತೆ ಅಭಿವೃದ್ಧಿ ಗೆ ಒತ್ತಾಯಿಸಿದರೆ ಅದಕ್ಕೆ ಶಾಸಕರು ಕಾಂಗ್ರೆಸ್ ಪ್ರತಿಭಟನೆ ಎಂದು ಹೇಳಿಕೆ ನೀಡುತ್ತಾರೆ. ಆ ರೀತಿಯ ಹೇಳಿಕೆ ನೀಡುವುದಕ್ಕಿಂತ ಶಾಸಕರು ಕೆಲಸ ಮಾಡಿ ತೋರಿಸಲಿ” ಎಂದು ಆಗ್ರಹಿಸಿದರು.
ಪ್ರಮುಖರಾದ ಸತ್ಯಕುಮಾರ್ ಆಡಿಂಜ ಹಾಗೂ ಡೇವಿಡ್‌ ಧೀರಾ ಕ್ರಾಸ್ತ ಮಾತನಾಡಿದರು.
ಹಲವು ಕಾಂಗ್ರೆಸ್ ಮುಖಂಡರು ಪ್ರತಿಭಟನೆ ಯಲ್ಲಿದ್ದರು.
ಬಳಿಕ ಆಗಮಿಸಿದ ನ.ಪಂ.ಮುಖ್ಯಾಧಿಕಾರಿ ಮತ್ತಡಿಯವರನ್ನು ರಸ್ತೆ ಅಭಿವೃದ್ಧಿ ಪಡಿಸದ ಕುರಿತು ಪ್ರಶ್ನಿಸಿದರು.

ಆ ವೇಳೆಗೆ ಸ್ಥಳಕ್ಕೆ ಬಂದ ಕಾಂಗ್ರೆಸ್ ಮುಖಂಡ ಎಂ.ವೆಂಕಪ್ಪ ಗೌಡರು ಮುಖ್ಯಾಧಿಕಾರಿಯವರನ್ನು ಆ ರಸ್ತೆ ಗುಂಡಿ ಮುಚ್ಚಲು ಅನುದಾನ ಇಡುವಂತೆ ಹೇಳಿದರಲ್ಲದೆ, ನ.ಪಂ.ಗೆ ದಿರುವ ಒಂದು ಕೋಟಿ ಅನುದಾನದಲ್ಲಿ ಆ ರಸ್ತೆಗೆ ಇಡಿ ಎಂದು ಹೇಳಿದರು.

ಮತ್ತೆ ಮಾತುಕತೆ ನಡೆದು ಮುಖ್ಯಾಧಿಕಾರಿ ಯವರು ಗುಂಡಿ ಮುಚ್ಚುವ ಭರವಸೆ ನೀಡಿದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.