Breaking News

ಸುಳ್ಯ ಎನ್.ಎಂ.ಪಿ.ಯು.ಸಿ ವಾರ್ಷಿಕೋತ್ಸವ-ಬದುಕಿನ ಅನುಭವಗಳು ಒಳ್ಳೆಯ ಪಾಠ ಕಲಿಸುತ್ತವೆ-ರೊ.ಇಂಜಿನಿಯರ್ ಅಶ್ವಿನ್ ಎಲ್.ಶೆಟ್ಟಿ

Advt_Headding_Middle
Advt_Headding_Middle
Advt_Headding_Middle

ಶಿಕ್ಷಣ ಒಂದೇ ಜೀವನದ ಮೂಲವಲ್ಲ. ಶಿಕ್ಷಣ ಮತ್ತು ಜ್ಞಾನಕ್ಕೆ ವ್ಯತ್ಯಾಸವಿದೆ. ಜೀವನ ಕೌಶಲಗಳನ್ನು ಅರಿತು ನಾವು ಮುನ್ನಡೆದಾಗ ಸಾಮರ್ಥ್ಯ ಗಟ್ಟಿಗೊಳ್ಳುವುದು. ಬದುಕು ನಮ್ಮನ್ನು ಬದಲಾಯಿಸುತ್ತದೆ. ಬದುಕಿನ ಸೋಲುಗಳು ಬದುಕಿನ ಪಾಠವನ್ನು ಹೇಳಿಕೊಡುತ್ತವೆ. ನಾವು ಮತ್ತೆ ಮತ್ತೆ ಕಲಿತದ್ದನ್ನು ಪುನರಾವಲೋಕನ ಮಾಡಿಕೊಳ್ಳಬೇಕು. ನೆನಪಿಸಿಕೊಳ್ಳಬೇಕು. ಸೂರ್‍ಯ ತನ್ನ ಪ್ರಕಾಶವನ್ನು ಬೀರುವುದನ್ನು ಹೇಗೆ ಬಿಡುವುದಿಲ್ಲವೋ ನಾವು ಕೂಡ ಬದುಕಿನಲ್ಲಿ ಉತ್ತಮ ಕೌಶಲಗಳನ್ನು ಅರಿತು ಬಾಳಬೇಕು. ನಮ್ಮ ಯೋಚನೆಗಳು ಉತ್ತಮವಾಗಿರಬೇಕು ಎಂದು ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ರೋ.ಇಂಜಿನಿಯರ್ ಅಶ್ವಿನ್.ಎಲ್.ಶೆಟ್ಟಿ ತಿಳಿಸಿದರು. ಅವರು ಸುಳ್ಯ ನೆಹರು ಮೆಮೋರಿಯಲ್ ಪ.ಪೂ.ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಒಳ್ಳೆಯದನ್ನು ನಾವು ಗೌರವಿಸಬೇಕು. ಹಣ ಸಂಪಾದನೆ ಒಳ್ಳೆಯ ಮಾರ್ಗದಲ್ಲಿ ಮಾಡಬೇಕು. ಹಣ ಸಂಪಾದನೆಯೇ ಜೀವನದ ಗುರಿ ಅಲ್ಲ. ನಾವು ಎಷ್ಟೇ ಎತ್ತರಕ್ಕೇರಿದರೂ ಹುಟ್ಟೂರಿನ ಬೆಳವಣಿಗೆಗೆ ಕಾರಣಕರ್ತರಾಗಬೇಕು. ಬದುಕುವ ಕಲೆಯನ್ನು ಎಲ್ಲರೂ ರೂಢಿಸಿಕೊಳ್ಳಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎ.ಓ.ಎಲ್.ಇ (ರಿ) ಇದರ ನಿರ್ದೇಶಕರಾದ ಶ್ರೀಮತಿ ಶೋಭಾ ಚಿದಾನಂದ ಅವರು ಮಾತನಾಡಿ ಒಳ್ಳೆಯ ವಿಚಾರಗಳನ್ನು ಪರಿಶುದ್ಧ ಮನದಿಂದ ಸ್ವೀಕರಿಸಿಕೊಳ್ಳಿ. ಜೀವನದಲ್ಲಿ ಕಠಿಣ ಪರಿಶ್ರಮ ಬಹಳ ಮುಖ್ಯ. ಉತ್ತಮ ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಮುನ್ನಡೆದಾಗ ಯಶಸ್ವೀ ಬದುಕು ನಮ್ಮದಾಗುತ್ತದೆ ಎಂದರು.
ಅತಿಥಿಯಾಗಿದ್ದ ಎನ್ನೆಂಸಿಯ ಶೈಕ್ಷಣಿಕ ಸಲಹೆಗಾರ ಪ್ರೊ.ಎಂ.ಬಾಲಚಂದ್ರ ಗೌಡ ಅವರು ಮಾತನಾಡಿ ಈ ಪ್ರಪಂಚ ಎಷ್ಟು ವಿಸ್ತಾರವಾಗಿದೆ ಇಲ್ಲಿ ನಿಮ್ಮ ಬದುಕಿನ ಸ್ಥಾನ ಹೇಗಿದೆ ಎಂದು ತಿಳಿದಿರಬೇಕು. ವ್ಯಕ್ತಿತ್ವ ವಿಕಸನಕ್ಕಾಗಿ ನಮಗೆ ವಿಫುಲ ಅವಕಾಶವಿದೆ. ಮುಖ್ಯವಾಗಿ ಸಾಧನೆ ಮಾಡಬೇಕು. ರಾಷ್ಟ್ರಕಟ್ಟಲು ಇದು ಸಹಕಾರಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಎನ್ನೆಂಸಿಯ ಪ್ರಾಂಶುಪಾಲರಾದ ಡಾ.ಕೆ.ಗಿರಿಧರ ಗೌಡ ಅವರು ಮಾತನಾಡಿ ಜೀವನ ಪಾಠ ನಾವೇ ಕಲಿತುಕೊಳ್ಳಬೇಕು. ಸವಾಲುಗಳನ್ನು ಎದುರಿಸಿ ಅಮಸ್ಯೆ ಪರಿಹರಿಸಿಕೊಳ್ಳಬೇಕು. ನಮ್ಮ ಬದುಕಿನ ಶಿಲ್ಪಿಗಳು ನಾವೇ ಹಾಗಾಗಿ ಶಾಂತಿಯುತವಾಗಿ ಬದುಕಿ ಒಳ್ಳೆಯ ನಾಗರಿಕರಾಗಿ ಎಂದು ತಿಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಹರಿಣಿ ಪುತ್ತೂರಾಯ, ವಿದ್ಯಾರ್ಥಿ ಕ್ಷೇಮಾಧಿಕಾರಿ ಲಕ್ಷ್ಮಣ್ ಏನೇಕಲ್, ವಿದ್ಯಾರ್ಥಿ ನಾಯಕ ರಜತ್‌ಕುಮಾರ್, ವಿದ್ಯಾರ್ಥಿ ನಾಯಕಿ ವಿಸ್ಮಿತ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ನಂದಿತ ಮತ್ತು ಬಳಗದವರು ಪ್ರಾರ್ಥಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಲಕ್ಷ್ಮಣ್ ಏನೆಕಲ್ ಸ್ವಾಗತಿಸಿದರು. ಕಾಲೇಜಿನ ವಾರ್ಷಿಕ ವರದಿಯನ್ನು ಪ್ರಾಂಶುಪಾಲೆ ಶ್ರೀಮತಿ ಹರಿಣಿ ಪುತ್ತೂರಾಯ ಅವರು ವಾಚಿಸಿದರು. ಉಪನ್ಯಾಸಕಿ ಶ್ರೀಮತಿ ವಿನುತ ಅತಿಥಿಗಳನ್ನು ಪರಿಚಯಿಸಿದರು.
ಕಲಿಕೆ,ದತ್ತಿನಿಧಿ ಬಹುಮಾನ, ವಿವಿದ ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು ಉಪನ್ಯಾಸಕಿಯರಾದ ಶ್ರೀಮತಿ ಸಾವಿತ್ರಿ.ಕೆ, ಶ್ರೀಮತಿ ರೇಶ್ಮ ಹಾಗೂ ದೈ.ಶಿ.ನಿರ್ದೇಶಕ ನಾಗರಾಜ ಭಟ್ಕಳ ವಾಚಿಸಿದರು. ವಿದ್ಯಾರ್ಥಿ ನಾಯಕ ರಜತ್‌ಕುಮಾರ್ ವಂದಿಸಿದರು. ಉಪನ್ಯಾಸಕಿಯರಾದ ಕು.ಬೇಬಿವಿದ್ಯಾ ಪಿ.ಬಿ. ಮತ್ತು ಶ್ರೀಮತಿ ವಿನುತ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಕ್ರೀಡಾಪಟುಗಳಾಗಿ ರಾಜ್ಯಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ವಿಸ್ಮಿತ.ಕೆ.ಪಿ, ಮಹಮ್ಮದ್ ಸುಹೈಬ್, ಮತ್ತು ಎ.ಜಿ.ಕಾರ್ತಿಕ್ ಇವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ವಿನೋದಾವಳಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.