HomePage_Banner
HomePage_Banner
Breaking News

ಸಿರಿಗನ್ನಡ ವೇದಿಕೆ ಮತ್ತು ಜಾಲ್ಸೂರು ಶಾಲೆಯ ಇದರ ಸಹಯೋಗದಲ್ಲಿ ಮಕ್ಕಳ ಕವಿಗೋಷ್ಟಿ ಮತ್ತು ಹಸ್ತಪ್ರತಿಯ ಬಿಡುಗಡೆ

ಸಿರಿಗನ್ನಡ ವೇದಿಕೆ ಸುಳ್ಯ ತಾಲೂಕು ಘಟಕ ಮತ್ತು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಜಾಲ್ಸೂರು ಇದರ ಸಹಯೋಗದಲ್ಲಿ ಮಕ್ಕಳ ಕವಿಗೋಷ್ಟಿ ಮತ್ತು ಮಕ್ಕಳ ಸ್ವರಚಿತ ಬರಹಗಳ ಸಂಕಲನದ ಹಸ್ತಪ್ರತಿಯ ಬಿಡುಗಡೆ ಕಾರ್ಯಕ್ರಮ ಸ.ಉ.ಪ್ರಾ. ಶಾಲೆ ಜಾಲ್ಸೂರಿನಲ್ಲಿ ನಡೆಯಿತು.

 

ಶಾಲಾ ಮುಖ್ಯೋಪಾಧ್ಯಾಯಿನಿ ಪುಷ್ಪಾವತಿ ಕೆ. ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದರು. ೧೯ ಮಂದಿ ಪುಟಾಣಿ ಕವಿ, ಕವಯತ್ರಿಯರು ಭಾಗವಹಿಸಿ ತಮ್ಮ ಸ್ವರಚಿತ ಕವನಗಳನ್ನು ವಾಚಿಸಿ ಎಲ್ಲರ ಗಮನ ಸೆಳೆದರು. ಸಿರಿಗನ್ನಡ ವೇದಿಕೆಯ ಸುಳ್ಯ ತಾಲೂಕು ಅಧ್ಯಕ್ಷರಾದ ಉದಯಭಾಸ್ಕರ್ ಸುಳ್ಯ ಮತ್ತು ಸಿರಿಗನ್ನಡ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷರಾದ ಅಶ್ವಿನಿ ಕೋಡಿಬೈಲು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಕ್ಕಳ ಕವನಗಳನ್ನು ವಿಮರ್ಶಿಸಿ, ಪ್ರಶಂಸನಾ ಪತ್ರ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಸಹಶಿಕ್ಷಕಿ ಮತ್ತು ಸಿರಿಗನ್ನಡ ವೇದಿಕೆಯ ಮಹಿಳಾ ಘಟಕದ ಉಪಾಧ್ಯಕ್ಷರಾದ ಪರಮೇಶ್ವರಿ ಪ್ರಸಾದ್ ಇವರ ಸಂಪಾದಕತ್ವದಲ್ಲಿ ಹೊರತರಲಾದ ಶಾಲಾ ಮಕ್ಕಳ ಸ್ವರಚಿತ ಬರಹಗಳ ಸಂಕಲನ ‘ನೇಸರ’ ಇದರ ಹಸ್ತಪ್ರತಿಯನ್ನು ಬಿಡುಗಡೆಗೊಳಿಸಲಾಯಿತು. ಹಸ್ತಪ್ರತಿಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದ ಸಂಪನ್ಮೂಲ ವ್ಯಕ್ತಿಗಳು ಆಕರ್ಷಕ ವಿನ್ಯಾಸದಿಂದ ಮೂಡಿಬಂದ ಹಸ್ತಪ್ರತಿಯ ಕುರಿತಾಗಿ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದರು.
ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯಿನಿ ಪುಷ್ಪಾವತಿಯವರು ಮಾತನಾಡುತ್ತಾ, “ಸಿರಿಗನ್ನಡ ವೇದಿಕೆಯವರು ನಡೆಸಿಕೊಟ್ಟ ಈ ಕವಿಗೋಷ್ಟಿಯು ನಮ್ಮ ಶಾಲೆಯಲ್ಲಿ ನಡೆದ ಪ್ರಪ್ರಥಮ ಮಕ್ಕಳ ಕವಿಗೋಷ್ಟಿಯಾಗಿದ್ದು, ಇದೊಂದು ಯಶಸ್ವಿ ಮಾದರಿ ಕಾರ್ಯಕ್ರಮವಾಗಿ ಮೂಡಿ ಬಂದಿದೆ. ಮಕ್ಕಳಲ್ಲಿ ಸಾಹಿತ್ಯಾಭಿರುಚಿಯನ್ನು ಜಾಗೃತಗೊಳಿಸುವಲ್ಲಿ ಇಂತಹ ಚಟುವಟಿಕೆಗಳು ಪೂರಕವಾಗಿದೆ” ಎಂದು ಸಿರಿಗನ್ನಡ ವೇದಿಕೆಯನ್ನು ಅಭಿನಂದಿಸಿದರು.

ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ ಕನ್ನಡಾಂಬೆಗೆ ಪುಷ್ಪಾರ್ಚನೆಗೈದರು. ಅಶ್ವಿನಿ ಕೋಡಿಬೈಲು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವರಚಿತ ಕವನ ವಾಚನದ ಮೂಲಕ ಕವಿಗೋಷ್ಟಿಗೆ ಚಾಲನೆ ನೀಡಿದರು. ಶಿಕ್ಷಕಿಯರಾದ ಪೂರ್ಣಿಮಾ ಅಂಬೆಕಲ್ಲು ಸ್ವಾಗತಿಸಿ, ದಿವ್ಯಾ ಅಳಿಕೆ ಧನ್ಯವಾದ ಸಮರ್ಪಿಸಿದರು. ಶಿಕ್ಷಕಿ ಪರಮೇಶ್ವರಿ ಪ್ರಸಾದ್ ಕವಿಗೋಷ್ಟಿಯನ್ನು ನಿರ್ವಹಿಸಿ ನಿರೂಪಿಸಿದರು. ಅತಿಥಿ ಶಿಕ್ಷಕಿ ಲಾವಣ್ಯ ಸಹಕರಿಸಿದರು. ಶಾಲಾಭಿವೃದ್ಧಿ ಸಮತಿಯ ಸದಸ್ಯೆ ಪ್ರೇಮಾ ಮತ್ತು ಸಿರಿಗನ್ನಡ ವೇದಿಕೆಯ ಸದಸ್ಯೆ ಪಲ್ಲವಿ ಕಬ್ಬಿನಹಿತ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.