HomePage_Banner
HomePage_Banner
Breaking News

ಐವರ್ನಾಡು ಎಸ್.ಬಿ.ಐ.ಬ್ಯಾಂಕಿನ ಗ್ರಾಹಕ ಸಂಪರ್ಕ ಸಭೆ

 

ಐವರ್ನಾಡು ಎಸ್.ಬಿ.ಐ ಬ್ಯಾಂಕ್ ಶಾಖೆಯ ಗ್ರಾಹಕ ಸಂಪರ್ಕ ಸಭೆಯು ಡಿ.07 ರಂದು ಐವರ್ನಾಡು ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.

ಶಾಖಾಧಿಕಾರಿ ಬ್ರಿಜೇಶ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಬ್ಯಾಂಕ್ ನ ಸಭೆಯ ಉದ್ದೇಶವನ್ನು ಹೇಳಿದರು.
ನಂತರ ಎಸ್.ಬಿ.ಐ ಬ್ಯಾಂಕಿನ ರೀಜನಲ್ ಮೆನೇಜರ್ ದಿನೇಶ್ ರವರು ಮಾತನಾಡಿ ಬ್ಯಾಂಕಿನಲ್ಲಿ ಡೆಪಾಸಿಟ್ ಕಡಿಮೆ ಇದೆ.ಶೇ 10 ಡೆಪಾಸಿಟ್ ಮಾತ್ರ ಇದೆ.ಗ್ರೋತ್ ಇಲ್ಲ.ಸುಮಾರು 43 ಲಕ್ಷ ಸಾಲಕೊಟ್ಟದ್ದೇವೆ . ಬ್ಯಾಂಕ್ ಲಾಭದಲ್ಲಿ ಇಲ್ಲ. ನಷ್ಟ ಮಾಡಿಕೊಂಡು ವ್ಯವಹಾರ ನಡೆಸಲು ಸಾಧ್ಯವಿಲ್ಲ.ನಮಗೆ ಲಾಭ ಇಲ್ಲದಿದ್ದರೂ ನಷ್ಟ ಆಗಬಾರದು ಎಂದು ಹೇಳಿದರು.


ಆಗ ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಎನ್.ಮನ್ಮಥರವರು ನೀವು ಬ್ಯಾಂಕ್ ಪ್ರಾರಂಭ ಮಾಡಿದ ಮೇಲೆ ಒಮ್ಮೆಯೂ ಜನರನ್ನು ಸಂಪರ್ಕಿಸುವ ಕೆಲಸ,ಅಥವಾ ಗ್ರಾಹಕ ಸಂಪರ್ಕ ಸಭೆಯನ್ನೂ ಕರೆದಿಲ್ಲ.ಜನರಿಗೆ ಸರಿಯಾದ ಸರ್ವಿಸ್ ಗಳನ್ನು ಲೋನ್ ಗಳನ್ನು ಕೊಟ್ಟರೆ ಜನರು ಬ್ಯಾಂಕಿಗೆ ಬರುತ್ತಾರೆ ವ್ಯವಹಾರ ಮಾಡುತ್ತಾರೆ.ನಿಮ್ಮ ಬ್ಯಾಂಕಿನಿಂದ ದೊರೆಯುವ ಸ್ಕೀಂ ನ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.ಆಗ ಸೇರಿದ್ದ ಗ್ರಾಮಸ್ಥರೂ ಕೂಡ ಮೊದಲು ನಿಮ್ಮ ಬ್ಯಾಂಕಿನಲ್ಲಿರುವ ಸ್ಟಾಫ್ ಗಳು ಗ್ರಾಹಕರೊಂದಿಗೆ ಸರಿಯಾಗಿ ವರ್ತಿಸುವುದಿಲ್ಲ .ಕ್ಯಾಶಿಯರ್ ಎನೇನೋ ಮಾತನಾಡುತ್ತಾರೆ ಇದರಿಂದ ಗ್ರಾಹಕರು ಬ್ಯಾಂಕಿಗೆ ಬರಲು ಹೆದರುತ್ತಾರೆ ಎಂದು ಹೇಳಿದರು.
ಚಂದ್ರಾ ಕೋಲ್ಚಾರ್ ರವರು ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿತವಾದ ಬ್ಯಾಂಕ್ ಜನರಿಗೆ ಸರ್ವಿಸ್ ಕೊಡಬೇಕು.ಜನರೊಂದಿಗೆ ಸ್ಪಂದಿಸಬೇಕು .ಇಲ್ಲಿಯ ಜನರಿಗೆ ಲೋನ್ ಕೊಡಬಹುದು .ಲೋನ್ ಕಟ್ಟುವವರೆ ಇಲ್ಲಿ ಇರುವುದು.ನಿಮ್ಮ ಸ್ಪಂದನ ಇಲ್ಲದೆ ಈ ರೀತಿ ಆಗಿದೆ.
ಇಲ್ಲಿಯ ಜನರು ಸುಳ್ಯ ಬ್ಯಾಂಕಿಗೆ ಹೋಗಿ ವ್ಯವಹಾರ ಮಾಡುತ್ತಾರೆ. ಅಲ್ಲಿರುವ ನಮ್ಮ ಗ್ರಾಮದವರ ಲೋನನ್ನು ಇಲ್ಲಿಗೆ ವರ್ಗಾಯಿಸಿ ಅವರು ಮತ್ತೆ ಇಲ್ಲಿಯೆ ವ್ಯವಹಾರ ಮಾಡುತ್ತಾರೆ ಎಂದು ಹೇಳಿದರು.
ಅದಕ್ಕೆ ರೀಜನಲ್ ಮೆನೇಜರ್ ದಿನೇಶ್ ರವರು ಮತ್ತು ಮುಖ್ಯ ವ್ಯವಸ್ಥಾಪಕರಾದ ಶ್ರೀಧರ್ ರವರು ಹಾಗೆ ಮಾಡಬಹುದು ಆದರೆ ಪಾರ್ಟಿಯ ಒಪ್ಪಿಗೆ ಪಡೆದು ಖಾತೆಯನ್ನು ವರ್ಗಾಯಿಸಬಹುದು ಎಂದು ಹೇಳಿದರು.
ನಮ್ಮ ಬ್ಯಾಂಕಿನಲ್ಲಿ ಜನರ ಸರ್ವಿಸ್ ಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಜನರೇಟರ್ ನೆಟ್ ಕನೆಕ್ಷನ್ ಗೆ ಎಲ್ಲಾ ಕಡೆ ಬ್ರಾಂಚ್ ಗಳಲ್ಲಿ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದರು.
ಶಾಂತಾರಾಮ ಕಣಿಲೆಗುಂಡಿ, ವಿಕ್ರಂ ಪೈ, ನಂದಿನಿ,ಬಾಲಕೃಷ್ಣ ಕೀಲಾಡಿ,ನಟರಾಜ್ ಸಿ.ಕೂಪ್,ನವೀನ ಚಾತುಬಾಯಿ,ಜಯಪ್ರಕಾಶ್ ನೆಕ್ರೆಪ್ಪಾಡಿ, ವೆಂಕಪ್ಪ ಗೌಡ ಜೆ.ಟಿ.ಮತ್ತಿತರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯು.ಡಿ.ಶೇಖರ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.

ಶಾಖೆಯ ವ್ಯವಹಾರದಲ್ಲಿ ಉನ್ನತಿ ಇಲ್ಲದಿರುವ ಬಗ್ಗೆ ಶಾಖೆಯನ್ನು ಬೇರೊಂದು ಶಾಖೆಯೊಂದಿಗೆ ವಿಲೀನಗೊಳಿಸುವ ವಿಚಾರದಲ್ಲಿ ಗ್ರಾಹಕರ ಅಭಿಪ್ರಾಯ ಸಂಗ್ರಹಿಸುವುದಕ್ಕಾಗಿ 2 ನೇ ಬಾರಿ ಸಭೆ ಕರೆಯಲಾಗಿತ್ತು.ನ.21 ರಂದು ನಡೆದ ಸಭೆಗೆ ಮೇಲಾಧಿಕಾರಿಗಳು ಬಂದಿರಲಿಲ್ಲ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.