HomePage_Banner
HomePage_Banner

ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಪೆರಾಜೆ ಕುಂಬಳಚೇರಿ ‘ವಾರ್ಷಿಕ ಕ್ರೀಡೋತ್ಸವ’ ಮತ್ತು ‘ದತ್ತಿನಿಧಿ ಪ್ರದಾನ’ ಕಾರ್ಯಕ್ರಮ

ಡಿ.5ರಂದು ಸ.ಮಾ.ಪ್ರಾ. ಶಾಲೆ ಪೆರಾಜೆ ಕುಂಬಳಚೇರಿ ‘ವಾರ್ಷಿಕ ಕ್ರೀಡೋತ್ಸವ’ ಮತ್ತು ‘ದತ್ತಿನಿಧಿ ಪ್ರದಾನ’ ಕಾರ್ಯಕ್ರಮ ಶಾಲಾ ಸುವರ್ಣ ರಂಗಮಂದಿರದಲ್ಲಿ ನಡೆಯಿತು.ಸಭೆಯ ಅಧ್ಯ೬ಕ್ಷತೆಯನ್ನು ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಧರ್ಮಪಾಲ ಪಿ.ಜೆ.ವಹಿಸಿದ್ದರು. ಪೆರಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಉದಯಚಂದ್ರ ಕುಂಬಳಚೇರಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪೆರಾಜೆ ಕ್ಲಸ್ಟರ್ ಸಿಆರ್‌ಪಿ ರೇಖಾ, ದತ್ತಿನಿಧಿ ದಾನಿಗಳಾದ ಮೊನಪ್ಪ ನಿಡ್ಯಮಲೆ, ಶ್ರೀಮತಿ ಇಂದಿರಾ ಸುಕುಮಾರ ಪೆರಾಜೆ ಅತಿಥಿಗಳಾಗಿದ್ದರು. ವೇದಿಕೆಯಲ್ಲಿ ಎಸ್.ಡಿ.ಎಮ್.ಸಿಯ ಉಪಾಧ್ಯಕ್ಷತೆ ಮಂಜುಳ ವಿ., ಸದಸ್ಯರುಗಳು, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಯುವಕಲಾ ಉಪಸ್ಥಿತರಿದ್ದರು. ಸಿ.ಆರ್.ಪಿ .ಶ್ರೀಮತಿ ರೇಖಾ ಮಾತನಾಡಿ ಶಾಲೆಯಲ್ಲಿ ವಿದ್ಯಾರ್ಥಿ ಕೇಂದ್ರಿತ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. 2018-2019 ನೇ ಸಾಲಿನಲ್ಲಿ 7ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನಗಳನ್ನು ವಿತರಿಸಲಾಯಿತು. ದಿನವಿಡೀ ವಿವಿಧ ಆಟೋಟಗಳನ್ನು ನಡೆಸಿ ವಿಜೇತರಾದವರಿಗೆ ಬಹುಮನಗಳನ್ನು ವಿತರಿಸಲಾಯಿತು. ಶಾಲೆಯ ಪ್ರಭಾರ ಶಿಕ್ಷಣ ಶಿಕ್ಷಕಿ ಶ್ರೀಮತಿ ಶಾಂತಲಾ ನಾಯ್ಕ್ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಮಾಡಿದರು. ಶಾಲೆಯ ಅತಿಥಿ ಶಿಕ್ಷಕಿಯರು, ಎಸ್.ಡಿ ಎಂ.ಸಿ.ಯವರು, ಊರವರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.