ಬೆಳ್ಳಾರೆ ಬೂಡು : ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ನೇಮೋತ್ಸವ ಸಹಾಯರ್ಥ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ

Advt_Headding_Middle
Advt_Headding_Middle
Advt_Headding_Middle

 

ಬೆಳ್ಳಾರೆ ಬೂಡು ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿ ಇದರ ಆಶ್ರಯದಲ್ಲಿ ನೇಮೋತ್ಸವ ಸಹಾಯರ್ಥ ಎರಡು ದಿನಗಳ ಮುಕ್ತ ಕ್ರಿಕೆಟ್ ಪಂದ್ಯಾಟಕ್ಕೆ ಡಿ.೨೮ ರಂದು ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿ ಮೈದಾನದಲ್ಲಿ ಚಾಲನೆ ನೀಡಲಾಯಿತು.


ಆರಂಭದಲ್ಲಿ ದೈವಸ್ಥಾನದ ಬಳಿ ದೀಪ ಬೆಳಗಿಸಲಾಯಿತು. ಅನಂತರ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿ ಆಡಳಿತ ಸಮಿತಿ ಅಧ್ಯಕ್ಷ ಸುಂದರ ತೊಡಿಕಾನ ಮಾತನಾಡಿ, ಕುಲದೇವರ ಆರಾಧನೆ ಮುಖ್ಯವಾದದು. ಈ ಬಗ್ಗೆ ಯುವ ಸಮುದಾಯ ಹೆಚ್ಚು ಅರಿತುಕೊಳ್ಳಬೇಕು. ಜೀರ್ಣಾವಸ್ಥೆಯಲ್ಲಿ ಇರುವ ದೈವಸ್ಥಾನಗಳು ಪುನರ್‌ಜೀವನಕ್ಕೆ, ಸಮಾಜದಲ್ಲಿನ ಅಶಕ್ತರಿಗೆ ನೆರವಾಗುವ ಕಾರ್ಯ ಸಂಘಟನೆ ಮೂಲಕ ಆಗಬೇಕು. ಇದು ನಿಜವಾದ ಧರ್ಮ ಮಾರ್ಗ ಎಂದರು.
ಮುಖ್ಯ ಅತಿಥಿ ಅಂಬೇಡ್ಕರ್ ತತ್ವಾ ರಕ್ಷಣಾ ವೇದಿಕೆ ಕರ್ನಾಟಕ ಇದರ ಸುಳ್ಯ ತಾಲೂಕು ಅಧ್ಯಕ್ಷ ಸುಂದರ ಪಾಟಾಜೆ ಮಾತನಾಡಿ, ಶಾಂತಿ, ತಾಳ್ಮೆ ಮಾರ್ಗ ರೂಢಿಸಿಕೊಂಡು ಕ್ರೀಡಾಕೂಟವನ್ನು ಯಶಸ್ಸಿಯಾಗಿ ಮುನ್ನೆಡುಸುವಂತೆ ಹೇಳಿದರು.
ಜನಸಮೃದ್ಧಿ ಮಲ್ಟಿ ಕೋ ಅಪರೇಟಿಂಗ್ ಸೊಸೈಟಿ ಸುಳ್ಯ ಶಾಖೆಯ ವ್ಯವಸ್ಥಾಪಕ ಜಗದೀಶ ಸುಳ್ಯ, ಮುಕ್ಕೂರು-ಪೆರುವಾಜೆ ಮೊಗೇರ ಗ್ರಾಮ ಸಮಿತಿ ಅಧ್ಯಕ್ಷ ಪುರುಷೋತ್ತಮ ಕುಂಡಡ್ಕ ಮಾತನಾಡಿದರು. ಅಂಬೇಡ್ಕರ್ ಸೇವಾ ಸಮಿತಿ ಉಪಾಧ್ಯಕ್ಷ ಚಂದ್ರಶೇಖರ ಮೇನಾಲ ಉಪಸ್ಥಿತರಿದ್ದರು. ಈ ಸಂದರ್ಭ ಕ್ರೀಡಾ ಚಟುವಟಿಕೆಯ ಪೋಷಕ ಜತ್ತಪ್ಪ ಅವರನ್ನು ಸಮಿತಿ ಪರವಾಗಿ ಸಮ್ಮಾನಿಸಲಾಯಿತು.
ಸಮಿತಿಯ ವಿಜಯ ಪಾಟಾಜೆ ಪ್ರಸ್ತಾವನೆಗೈದು ಸ್ವಾಗತಿಸಿದರು. ಯಶವಂತ ಕಲಾಯಿ ವಂದಿಸಿದರು. ಸಾಗರ್ ಬೆಳ್ಳಾರೆ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.