HomePage_Banner
HomePage_Banner
HomePage_Banner
HomePage_Banner

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಿರುಷಷ್ಠಿ ಮಹೋತ್ಸವಕ್ಕೆ ಚಾಲನೆ

 

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ ಮಹೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳಿಗೆ ಡಿ.28 ರಂದು ದೀಪ ಬೆಳಗಿಸುವುದರ ಮೂಲಕ ದೇವಳದ ಆಡಳಿತಾಧಿಕಾರಿ ಎಂ.ಜೆ ರೂಪ ಅವರು ಚಾಲನೆ ನೀಡಿದರು.


ಬಳಿಕ ಮಾತನಾಡಿದ ಅವರು ಅದ್ದೂರಿ ಚಂಪಾ ಷಷ್ಟಿ ಮಹೋತ್ಸವ ಬಳಿಕ ಕಿರು ಷಷ್ಠಿ ಆರಂಭ ಗೊಂಡಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ಮಾಡಿ ಕೊಡಲಾಗಿದೆ. ಹೆಚ್ಚಿನ ಕಲಾಸ್ತರು ಇದರಲ್ಲಿ ಭಾಗವಹಿಸಿ ಕಲಾವಿದರನ್ನು ಪ್ರೊತ್ಸಾಹಿಸಬೇಕು. ಹಾಗೂ ಹೆಚ್ಚಿನ ಸಂಖ್ಯೆಯ ಜನರು ಭಾಗ ವಹಿಸುವಂತೆ ದೇವಳದವರು, ಕಲಾಸಕ್ತರು ಪ್ರಯತ್ನಿಸ ಬೇಕು ಎಂದರು.


ವೇದಿಕೆಯಲ್ಲಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಂ.ಎಚ್ ರವೀಂದ್ರ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲು ಉಪಸ್ಥಿತರಿದ್ದರು. ವಿನ್ಯಾಸ್ ಹೊಸೋಳಿಕೆ ಕಾರ್ಯಕ್ರಮ ನಿರೂಪಿಸಿದರು.


ದೇವಳದ ರಥಬೀದಿ
ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತಿದ್ದು ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇಲ್ಲಿನ
ಇಲ್ಲಿನ ವಿದ್ಯಾರ್ಥಿಗಳಿಂದ ಕಾರ್ತಿಕೇಯ ಕಲ್ಯಾಣ ನೃತ್ಯ ವೈಭವ ಕಾರ್ಯಕ್ರಮ ಆರಂಭ ಗೊಂಡಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.