ಕಲಿಯುಗದಲ್ಲಿ ದೇವರನ್ನು ಒಲಿಸಿಕೊಳ್ಳಲು ಇರುವ ಸುಲಭ ಸಾಧನೆ ಭಜನೆ – ಸುಬ್ರಹ್ಮಣ್ಯ ಶ್ರೀ

Advt_Headding_Middle
Advt_Headding_Middle


ಹಿಂದಿನ ಕಾಲದಲ್ಲಿ ಅನಂತ ತಪಸ್ಸಿನಿಂದ ಭಗವಂತನನ್ನು ಒಳಿಸಿಕೊಂಡರೆ ಅಲ್ಪ ಫಲ ದೊರೆಯುತ್ತಿತ್ತು. ಕಲಿಯುಗದಲ್ಲಿ ಮಾನವರು ನೂರಾರು ವರ್ಷ ಬದುಕಲು ಸಾಧ್ಯವಿಲ್ಲದಿರುವುದರಿಂದ ಅಲ್ಪ ತಪಸಸ್ಸಿಗೆ ಭಗವಂತನು ಅನಂತ ಫಲವನ್ನು ನೀಡುತ್ತಾನೆ. ಹಾಗಾಗಿ ಕಲಿಯುಗದಲ್ಲಿ ಭಗವಂತನನ್ನು ಒಲಿಸಿಕೊಳ್ಳಲು ಇರುವ ಸುಲಭ ಸಾಧನ ದೇವರ ನಾಮ ಸಂಕೀರ್ತನ, ಭಜನೆ. ನಮ್ಮ ಮನೆಯಲ್ಲಿ ಮಕ್ಕಳಿಗೆ ಎಳವೆಯಲ್ಲಿಯೇ ಭಜನೆಯ ಬಗ್ಗೆ, ದೇವರ ನಾಮವನ್ನು ಭಜಿಸುವಂತೆ ಪ್ರೋತ್ಸಾಹಿಸಿಬೇಕು. ಧಾರ್ಮಿಕತೆಯನ್ನು ಬೆಳೆಸಬೇಕು ಎಂದು ವಿದ್ಯಾಪ್ರಸನ್ನ ತೀರ್ಥ ಸ್ವಾಮಿಯವರು ಅಭಿಪ್ರಾಯಪಟ್ಟರು.

ಅವರು ಜ. 1 ರಂದು ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ನಡೆದ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗರು ಸ್ವಾಮೀಜಿಯವರನ್ನು ಸ್ವಾಗತಿಸಿ ಫಲ ಪುಷ್ಪವನ್ನು ನೀಡಿ ಗೌರವಿಸಿದರು. ದೇವಳದ ಮೊಕ್ತೇಸರರಾದ ಯಂ. ಲಕ್ಷ್ಮೀನಾರಾಯಣ ಶ್ಯಾನುಭಾಗ್, ಬಿ. ಸುರೇಶ್ ಶೆಣೈ, ಬಿ. ಮಿಥುನ್ ಶೆಣೈ, ಬಿ. ಕೃಷ್ಣ ಪೈ, ಬಿ. ಸುದರ್ಶನ ಮಲ್ಯ, ಅರ್ಚಕ ಅಣ್ಣು ಭಟ್, ಭಜನಾ ಮಹೋತ್ಸವದ ಸಂಚಾಲಕ ಬಿ. ವೆಂಕಟೇಶ ಪೈ, ಗೌಡ ಸಾರಸ್ವತ ಬ್ರಾಹ್ಮಣ ಯುವಕ ವೃಂದದ ಅಧ್ಯಕ್ಷ ಎಂ. ರಾಜೇಶ್ ಶ್ಯಾನುಭಾಗ್ ಮತ್ತು ಸದಸ್ಯರು, ಭಕ್ತ ವೃಂದದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ಬಳಿಕ ಮಹಾ ಸಮಾರಾಧನೆ ನಡೆಯಲಿದೆ. ಸಂಜೆ 6 ಗಂಟೆಗೆ ವಿಶೇಷ ದೀಪಾಲಂಕಾರ ಸೇವೆ, ರಾತ್ರಿ 9.00 ಗಂಟೆಗೆ ಭಜನಾ ಮಂಗಲೋತ್ಸವ ನಡೆದು ಲಘು ಉಪಹಾರ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.