ಕುಕ್ಕೆ ಸುಬ್ರಹ್ಮಣ್ಯ: ಧರ್ಮ ಸಮ್ಮೇಳನ ಆಂತರಿಕ ಸೌಂದರ್ಯವೇ ಧಾರ್ಮಿಕತೆ – ವಿಠಲ ನಾಯಕ್

Advt_Headding_Middle
Advt_Headding_Middle


ಜೀವನದಲ್ಲಿ ತಂದೆ ತಾಯಿಯರ ಕಣ್ಣಲ್ಲಿ ನೀರು ತರಿಸಿ ದೇವಸ್ಥಾನಗಳಿಗೆ ಭೇಟಿ ನೀಡಿದರೆ ಏನು ಪ್ರಯೋಜನ. ಮನುಷ್ಯ ಮೊದಲು ಮಾನವ ಧರ್ಮವನ್ನು ಅರ್ಥ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಜೀವನದಲ್ಲಿ ಮಾರ್ಕ್ ಮುಖ್ಯ ಅಲ್ಲ. ರಿಮಾರ್ಕ್ ಇಲ್ಲದೆ ಜೀವನ‌ ನಡೆಸುವಂತೆ ಮಕ್ಕಳನ್ನು ಬೆಳೆಸಿ.
ಪ್ರತೀ ಮನೆಯಿಂದ ಸಂಸ್ಕಾರ ಪ್ರಾರಂಭವಾಗಬೇಕು. ನಮ್ಮ ನಮ್ಮ ಜೀವನದಲ್ಲಿ
ನಮ್ಮ ಧರ್ಮವನ್ನು ನಾವು ಪಾಲಿಸಿಬೇಕು ಎಂದು ಬೊಳಂತಿಮೊಗರು ಶಾಲಾ ಶಿಕ್ಷಕ ವಿಠಲ ನಾಯಕ್ ಹೇಳಿದರು. ಅವರು ಜ. 1 ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಿರುಷಷ್ಠಿ ಅಂಗವಾಗಿ ನಡೆದ ಧರ್ಮ ಸಮ್ಮೇಳನದಲ್ಲಿ ದಾರ್ಮಿಕ ಉಪನ್ಯಾಸ ನೀಡಿದರು.

ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಸ್. ಅಂಗಾರ ವಹಿಸಿದ್ದರು. ದೇವಳದ ಆಡಳಿತಾಧಿಕಾರಿ ಎಂ.ಜೆ.ರೂಪಾ ಧರ್ಮ ಸಮ್ಮೇಳನವನ್ನು ಉದ್ಘಾಟಿಸಿದರು. ಆಡಳಿತಾಧಿಕಾರಿ ರವೀಂದ್ರ ಎಂ.ಎಚ್ ಸ್ವಾಗತಿಸಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್ ವಂದಿಸಿದರು. ಉಪನ್ಯಾಸಕರುಗಳಾದ ವಿಶ್ವನಾಥ ನಡುತೋಟ ಮತ್ತು ರತ್ನಾಕರ ಎಸ್. ಕಾರ್ಯಕ್ರಮ ನಿರೂಪಿಸಿದರು. ದೇವಳದ ನಿವೃತ್ತ ಸಿಬ್ಬಂದಿ ಪಿ.ಎಸ್. ಸುಬ್ರಹ್ಮಣ್ಯ ರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ವ್ಯಕ್ತಿ ತನ್ನ ವ್ಯಕ್ತಿಗತ ಜೀವನದಲ್ಲಿ ತನ್ನ ಧರ್ಮವನ್ನು ತಾನು ಪಾಲಿಸಿದರೆ ಅದು ಧರ್ಮಿಕತೆ. ಜೀವನದಲ್ಲಿ ಕೆಲವು ನಿಯಮಗಳನ್ನು ನಾವು ಪಾಲಿಸದೇ ಇದ್ದರೆ ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಭಕ್ತಿಯಿಂದ ಮಾತ್ರ ಮುಕ್ತಿಯನ್ನು ಪಡೆಯಲು ಸಾಧ್ಯ. – ಎಸ್. ಅಂಗಾರ ಶಾಸಕರು, ಸುಳ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.