ಮದ್ರಸ ಅಧ್ಯಾಪಕರ “ಪ್ರತಿಭಾ ಸಂಗಮ” ರಾಜ್ಯ ಮಟ್ಟಕ್ಕೆ ಆಯ್ಕೆ

Advt_Headding_Middle
Advt_Headding_Middle

ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ

 

ಝುಬೈರ್ ಹಿಮಮಿ ಪರಪ್ಪು

ಮುಹಮ್ಮದ್ ಹನೀಫ್ ಸಖಾಫಿ ಬೆಳ್ಳಾರೆ

ಮದ್ರಸ ಅಧ್ಯಾಪಕ ಒಕ್ಕೂಟ ಎಸ್ ಜೆ ಎಂ ದಕ್ಷಿಣ ಕನ್ನಡ ಜಿಲ್ಲಾ ಈಸ್ಟ್ ವಿಭಾಗ ವತಿಯಿಂದ ಮದ್ರಸ ಅಧ್ಯಾಪಕರ ಪ್ರತಿಭಾ ಸಂಗಮವು ಕೂರತ್ ಮಸೀದಿಯ ಸಭಾಂಗಣದಲ್ಲಿ ನಡೆಯಿತು. ಜಿಲ್ಲಾ ವ್ಯಾಪ್ತಿಯ ಹದಿನಾಲ್ಕು ರೇಂಜ್ ಗಳ ಮದ್ರಸ ಅಧ್ಯಾಪಕರುಗಳು ಭಾಗವಹಿಸಿ ವಿವಿಧ ವಿಷಯಗಳಲ್ಲಿ ತಮ್ಮ ಪ್ರತಿಭೆಯನ್ನು ತೋರ್ಪಡಿಸಿದರು. ಸುಳ್ಯ ರೇಂಜ್ ಅಧ್ಯಾಪಕರು ಉತ್ತಮ ರೀತಿಯಲ್ಲಿ ಸ್ಪರ್ಧಿಸಿ ತೃತೀಯ ಸ್ಥಾನ ಪಡೆದು , ಆ ಪೈಕಿ ಗಾಂಧಿನಗರ ಮದ್ರಸ ಅಧ್ಯಾಪಕರುಗಳಾದ ಮುಹಮ್ಮದ್ ಹನೀಫ್ ಸಖಾಫಿ ಬೆಳ್ಳಾರೆ ಅಂತ್ಯಾಕ್ಷರಿ ಪದ್ಯದಲ್ಲಿ ಪ್ರಥಮ ಸ್ಥಾನ ಪಡೆದು, ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಮಲಯಾಳ ಭಾಷಣದಲ್ಲಿ ಪ್ರಥಮ ಸ್ಥಾನ ಪಡೆದು ಹಾಗೂ ಅನ್ಸಾರಿಯ್ಯಾ ಮದ್ರಸ ಜಟ್ಟಿಪಳ್ಳದ ಝುಬೈರ್ ಹಿಮಮಿ ಇಂಗ್ಲೀಷ್ ಭಾಷಣದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಪ್ರಸ್ತುತ ಸ್ಫರ್ಧೆಯು ಇದೇ ಜನವರಿಯಲ್ಲಿ ಉಡುಪಿಯಲ್ಲಿ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.