ಯೇನೆಕಲ್ಲು: ಸತ್ಯಾಗ್ರಹ ನಿರತ ಯಶೋಚಂದ್ರ ಪರಮಲೆಯವರನ್ನು ಭೇಟಿ ಮಾಡಿದ ಬಿ.ಜೆ.ಪಿ. ಮುಖಂಡರು

Advt_Headding_Middle
Advt_Headding_Middle

ಯೇನೆಕಲ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ತನಗೆ ಅನ್ಯಾಯವಾಗಿದೆಯೆಂದು ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದ ಸಹಕಾರಿ ಸಂಘದ ಸ್ಥಾಪಕ ಅಧ್ಯಕ್ಷ, ಸ್ಥಳದಾನಿ ಪಿ.ಎಸ್. ರಾಮಣ್ಣ ಮಾಸ್ತರ್ ರವರ ಪುತ್ರ ಯಶೋಚಂದ್ರ ಪರಮಲೆಯವರನ್ನು ಯೇನೆಕಲ್ಲಿನ ಬಿ.ಜೆ.ಪಿ. ಮುಖಂಡರು ಭೇಟಿಯಾಗಿ ಮಾತುಕತೆಯ ಮೂಲಕ ಸಮಸ್ಯೆ ಬಗೆ ಹರಿಸುವ ಬಗ್ಗೆ ಆಶ್ವಾಸನೆ ನೀಡಿ ಉಪವಾಸವನ್ನು ನಿಲ್ಲಿಸುವಂತೆ‌ ಮನವಿ ಮಾಡಿದರೆನ್ನಲಾದ ಘಟನೆ ಜ. 2 ರಂದು ನಡೆದಿದೆ.

ಸಹಕಾರಿ ಸಂಘ ಮತ್ತು ಯಶೋಚಂದ್ರ ರವರ ಮಧ್ಯೆ ಯಾವುದೇ ಸಮಸ್ಯೆಯಿದ್ದರೂ ಊರಿನ ಪ್ರಮುಖರೆಲ್ಲ ಒಟ್ಟಾಗಿ ಸೇರಿ ಮಾತುಕತೆ ನಡೆಸಿ ಸಮಸ್ಯೆ ಬಗೆ ಹರಿಸುವ ಬಗ್ಗೆ ಅವರಿಗೆ ಆಶ್ವಾಸನೆ ನೀಡಲಾಗಿದೆ ಎಂದು ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯ ಭವಾನಿಶಂಕರ ಪೂಂಬಾಡಿ ಸುದ್ದಿಗೆ ತಿಳಿಸಿದರು. ಬಿ.ಜೆ.ಪಿಮ ಹಿರಿಯ ಮುಖಂಡರಾದ ಬಿಳಿನೆಲೆ ಗ್ರಾ.ಪಂ. ಸದಸ್ಯ ಶಿವಪ್ರಸಾದ್ ನಡುತೋಟ, ಗಿರಿಯಪ್ಪ ಗೌಡ ಬಾಲಾಡಿ, ಸೂರಪ್ಪ ಗೌಡ ಬಾಲಾಡಿ, ಶಿವರಾಮ ನೆಕ್ರಾಜೆ, ನಾಗೇಶ್ ನೆಕ್ರಾಜೆ, ಪದ್ಮನಾಭ ಗೌಡ ಬಾಲಾಡಿ, ಬೆಳ್ಯಪ್ಪ ಮಾಸ್ಟರ್ ಉಡ್ದೋಳಿ, ಕಿರಣ್ ಕುಮಾರ್ ಮಾದನಮನೆ, ತಿಮ್ಮಪ್ಪ ಗೌಡ ಕೋಡಿಬೈಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.