ಬಳ್ಪದಲ್ಲಿ ಚಿರತೆ ದಾಳಿ : ಮೂವರಿಗೆ ಗಾಯ

Advt_Headding_Middle
Advt_Headding_Middle

 

ಬಳ್ಪ ಗ್ರಾಮದ ಆಲ್ಕಬೆ ಬಳಿ ಉರುಳಿಗೆ ಬಿದ್ದು ಗಾಯಗೊಂಡಿದ್ದ ಚಿರತೆಯೊಂದು ಸ್ಥಳೀಯರಾದ ಕಾಯರ ಬಾಲಕೃಷ್ಣ ಎಂಬವರಿಗೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿದ್ದಲ್ಲದೆ ಚಿರತೆಯನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಇಬ್ಬರು ಅರಣ್ಯ ಇಲಾಖಾ ಸಿಬ್ಬಂದಿಗಳ ಮೇಲೂ ದಾಳಿ ಮಾಡಿ ಮೂರು ಮಂದಿಯೂ ಅಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

 

ಬಳ್ಪ ಗ್ರಾಮದ ಆಲ್ಕಬೆ ಸಮೀಪ ಯಾರೋ ಇಟ್ಟ ಉರುಳಿಗೆ ಚಿರತೆ ಬಿದ್ದಿದ್ದು, ಅದು ಗಾಯಗೊಂಡಿತ್ತೆ ನ್ನಲಾಗಿದೆ. ಬಾಲಕೃಷ್ಣ ರವರು ಮನೆಗೆ ಹುಲ್ಲನ್ನು ಹೊತ್ತುಕೊಂಡು ಹೋಗುವಾಗ ಚಿರತೆ ಏಕಾಏಕಿ ದಾಳಿ ನಡೆಸಿ ಬಾಲಕೃಷ್ಣರ ಮುಖದ ಭಾಗಕ್ಕೆ ಗಂಭೀರ ಗಾಯ ಮಾಡಿದೆ. ಬಾಲಕೃಷ್ಣರನ್ನು ಪುತ್ತೂರು ಆಸ್ಪತ್ರೆಗೆ ಕೊಂಡೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

ವಿಷಯ ತಿಳಿದ ಅರಣ್ಯ ಇಲಾಖೆಯವರು ಚಿರತೆಯನ್ನು ಬಂಧಿಸುವ ಕಾರ್ಯಾಚರಣೆಯನ್ನು ಮಧ್ಯಾಹ್ನದಿಂದಲೇ ಕೈಗೊಂಡಿದ್ದರು. ಊರವರು ನೂರಾರು ಮಂದಿ ಈ ಪ್ರದೇಶಕ್ಕೆ ಜಮಾಯಿಸಿದರು. ಚಿರತೆಯನ್ನು ಬಲೆ ಬೀಸಿ ಹಿಡಿಯಲೆತ್ನಿಸಿದಾಗ ಸಂಜೆ ಸುಮಾರು 6 ಗಂಟೆಯ ಹೊತ್ತಿಗೆ ಎ.ಸಿ.ಎಫ್. ಅಗಸ್ಟಿನ್ ಮತ್ತು ಇಲಾಖಾ ಸಿಬ್ಬಂದಿ ದಿವೀಶ್ ರ ಮೇಲೆ ಚಿರತೆ ಎರಗಿ ಗಾಯಗೊಳಿಸಿದ್ದು, ಅವರಿಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಗಿದೆಯೆಂದು ತಿಳಿದು ಬಂದಿದೆ.

ಚಿರತೆ ಪೊದೆಯಲ್ಲಿ ಅವಿತು ಕುಳಿತಿದ್ದು, ಸುತ್ತ ಕತ್ತಲಾವರಿಸಿರುವುದರಿಂದ ಚಿರತೆಯನ್ನು ಹಿಡಿಯುವ ಪ್ರಯತ್ನ ಸಫಲವಾಗದ ಹಿನ್ನೆಲೆಯಲ್ಲಿ ಸುತ್ತ‌ಮುತ್ತಲಿನ ಮನೆಯವರು ಭಯಭೀತರಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಡ್ರೋನ್ ಕ್ಯಾಮರಾ ಬಳಸಿ ಒಂದು ಸಲ ಚಿರತೆಯನ್ನು ಪತ್ತೆ ಹಚ್ಚಿ ಪೊದೆಯಿಂದ ಎಬ್ಬಿಸಲಾಯಿತು. ಆದರೆ ಕ್ಯಾಮರಾದ ಬ್ಯಾಟರಿ ಕ್ಷೀಣಿಸಿದ ಕಾರಣ ಡ್ರೋನ್ ಕ್ಯಾಮರಾದ ಬಳಕೆಯನ್ನು ನಿಲ್ಲಿಸಲಾಯಿತೆಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.