Breaking News

ಸುಳ್ಯದಲ್ಲಿ ಪೇಜಾವರ ಶ್ರೀಗಳ ಅಭಿಮಾನಿ ಬಳಗದಿಂದ ಸಂಸ್ಮರಣಾ ಕಾರ್ಯಕ್ರಮ

Advt_Headding_Middle
Advt_Headding_Middle

ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಶ್ರೀಪಾದರು ಡಿ.29 ರಂದು ಅಸ್ತಂಗತರಾಗಿದ್ದು ಅವರಿಗೆ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಅವರ ಅಭಿಮಾನಿ ಬಳಗದ ವತಿಯಿಂದ ಸಂಸ್ಮರಣಾ ಕಾರ್ಯಕ್ರಮವು ಜ.2 ರಂದು ನಡೆಯಿತು.

 

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸುಳ್ಯ ತಾಲೂಕು ಸಂಘ ಚಾಲಕ ಚಂದ್ರಶೇಖರ ತಳೂರುರವರು ಮಾತನಾಡಿ ಪೇಜಾವರ ಶ್ರೀಗಳು ಸಮಾಜಕ್ಕಾಗಿ ಬದುಕಿದವರು.ಸಮಾಜಕ್ಕೆ ತೊಂದರೆಯಾದಾಗ ಅವರು ಮೊದಲು ಆಗಮಿಸಿ ಪರಿಹಾರ ಮಾಡುತ್ತಿದ್ದರು.ರಾಮಜನ್ಮ ಭೂಮಿಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.ಪೇಜಾವರ ಶ್ರೀಗಳು ನೇತೃತ್ವ ವಹಿಸಿದ್ದರು.ಹಿಂದೂ ಸಮಾಜಕ್ಕೆ ಶಕ್ತಿ ನೀಡಿದ್ದಾರೆ.ಯಾವುದೇ ಕಾರ್ಯಕ್ರಮಕ್ಕೆ ಬಂದರೆ ಅವರ ಮಾತಿನ ಹಿಂದೆ ವ್ಯವಹಾರಿಕ ಬದುಕಿನ ಬಗ್ಗೆ ಮತ್ತು ಸಮಾಜವನ್ನು ಜೋಡಿಸುವ ಮಾತುಗಳನ್ನು ಹೇಳುತ್ತಿದ್ದರು.

ಪ್ರವಾಹ ಪೀಡಿತ ಪ್ರದೇಶಗಳಿಗೂ ಭೇಟಿ ನೀಡಿ ನಿರಾಶ್ರಿತರಿಗೆ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ ಅವರ ನೆನಪು ನಮಲ್ಲಿ ಸದಾ ಇರುತ್ತದೆ ಅವರು ನಮ್ಮನ್ನು ಹರಸುತ್ತಾರೆ ಎಂದು ನುಡಿನಮನ ಸಲ್ಲಿಸಿದರು.
ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ,ಚಂದ್ರಶೇಖರ ದಾಮ್ಲೆ,ಶ್ರೀಮತಿ ಯಶೋಧ ರಾಮಚಂದ್ರ,ವೆಂಕಟೇಶ ಶಾಸ್ತ್ರಿ,ಗಿರೀಶ್ ಭಾರದ್ವಾಜ್ ರವರು ನುಡಿನಮನ ಸಲ್ಲಿಸಿದರು.
ವಿನಯ ಕುಮಾರ್ ಕಂದಡ್ಕ ಸ್ವಾಗತಿಸಿ,ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಗಣಪತಿ ಭಟ್ ವಂದಿಸಿದರು.
ಸುಳ್ಯ.ಸಿ.ಎ.ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಮತ್ತು ರಾಜೇಶ್ ಮೇನಾಲ ಸಹಕರಿಸಿದರು.
ಆಗಮಿಸಿ ಗಣ್ಯರು ಪೇಜಾವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಮನಮನ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.