Breaking News

ಪಂಜ: ಪುತ್ಯ ತೋಟ ಮನೆಯಲ್ಲಿ ಸೇವಾರ್ಥವಾಗಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

Advt_Headding_Middle
Advt_Headding_Middle

ಕೂತ್ಕುಂಜ ಗ್ರಾಮದ ತೋಟ ಪುತ್ಯ ತಿಮ್ಮಪ್ಪ ಗೌಡರ ಮನೆಯಲ್ಲಿ ಜ.1 ರಂದು ಸೇವಾರ್ಥವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ 2 ನೇ ಮೇಳದ ಕಲಾವಿದರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಿತು.


ಬೆಳಗ್ಗೆ ಗಣಪತಿ ಹವನ ನಡೆದು ಮಧ್ಯಾಹ್ನ ಶ್ರೀ ಸತ್ಯನಾರಾಯಣ ದೇವರ ಪೂಜೆ ಯಾಗಿ ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಿತು. ಬಳಿಕ ಸಂಜೆ ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದ ಸದಸ್ಯರಿಂದ ಮತ್ತು ಸ್ಥಳೀಯ ಭಜಕರಿಂದ ಭಜನಾ ಸೇವೆಯು ನಡೆಯಿತು. ರಾತ್ರಿ ಶ್ರೀ ದೇವಿಗೆ ಚೌಕಿಪೂಜೆಯಾಗಿ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆಯಾಯಿತು. ನಂತರ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಆಗಮಿಸಿದ ಸರ್ವರನ್ನು ಡಿ.ಸಿ.ಸಿ.ಬ್ಯಾಂಕ್ ಮೇಲ್ವಿಚಾರಕ ಬಾಲಕೃಷ್ಣ ಪುತ್ಯ ರವರು ಸ್ವಾಗತಿಸಿದರು. ಡಿ.ಸಿ.ಸಿ.ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರುಗಳು, ಸಿ.ಇ.ಒ.ರವರು ಸಿಬ್ಬಂದಿ ವರ್ಗದವರು ಊರ ಪರ ಊರ ಬಂಧುಗಳು, ಹಿತೈಷಿ ಮಿತ್ರರು ಆಗಮಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.