ಗೂನಡ್ಕ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ವಿವಿಧ ರೀತಿಯ ಗಣಿತದ ಮಾದರಿ ಪ್ರದರ್ಶನ

Advt_Headding_Middle
Advt_Headding_Middle

ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೂನಡ್ಕದಲ್ಲಿ ಗಣಿತ ಮಾದರಿ ಪ್ರದರ್ಶನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಪ್ರೊಫೆಸರ್ ಜಯಚಂದ್ರ ಹಾಗೂ ಗಣಿತ ಶಿಕ್ಷಕರಾದ  ಮಾಧವ ಗೌಡರವರು ಉದ್ಘಾಟಿಸಿ ಶುಭ ಕೋರಿದರು.

ನರ್ಸರಿ ಮಕ್ಕಳಾದ LKG-A ವಿಭಾಗದ ಮಕ್ಕಳು Lines & Strokes ಮಾದರಿ, LKG-B ವಿಭಾಗದ ಮಕ್ಕಳು ಸಂಖ್ಯಾ ಮಾದರಿ, UKG-A ವಿಭಾಗದ ಮಕ್ಕಳು ಚಿಹ್ನೆಗಳ ಮಾದರಿ, UKG-B ವಿಭಾಗದ ವಿದ್ಯಾರ್ಥಿಗಳು ಅಳತೆ ಮತ್ತು ಗಾತ್ರದ ಮಾದರಿಯನ್ನು ಸಿದ್ಧಪಡಿಸಿದ್ದರು. ಒಂದನೇ ‘ಎ’ ವಿಭಾಗದ ವಿದ್ಯಾರ್ಥಿಗಳು ಗಡಿಯಾರದ ಮಾದರಿ, ಒಂದನೇ ‘ಬಿ’ ವಿಭಾಗದ ವಿದ್ಯಾರ್ಥಿಗಳು ಏರಿಕೆ ಮತ್ತು ಇಳಿಕೆ ಕ್ರಮದ ಮಾದರಿ, ಎರಡನೇ ‘ಎ’ ವಿಭಾಗದ ವಿದ್ಯಾರ್ಥಿಗಳು ಕರೆನ್ಸಿ ಟ್ರೀ ಮಾದರಿ, ಎರಡನೇ ‘ಬಿ’ ವಿಭಾಗದ ಮಕ್ಕಳು ದಾಳದ ಮಾದರಿ, ಮೂರನೇ ತರಗತಿಯ ವಿದ್ಯಾರ್ಥಿಗಳು ಗುಣಾಕಾರ ಕೋಷ್ಟಕಗಳ ಮಾದರಿ, ನಾಲ್ಕನೇ ತರಗತಿ ವಿದ್ಯಾರ್ಥಿಗಳು ಭಾಗಾಕಾರದ ಯಂತ್ರ ಮಾದರಿಯನ್ನು ತಯಾರಿಸಿದ್ದರು. ಹಿರಿಯ ಪ್ರಾಥಮಿಕ ವಿಭಾಗದ ಐದನೇ ತರಗತಿ ವಿದ್ಯಾರ್ಥಿಗಳು ಅಪವರ್ತನ ಮರದ ಮಾದರಿ, ಆರನೇ ತರಗತಿಯ ವಿದ್ಯಾರ್ಥಿಗಳು ಪೈಥಾಗೊರಸ್ ನ ಪ್ರಮೇಯದ ಮಾದರಿ, ಏಳನೇ ತರಗತಿ ವಿದ್ಯಾರ್ಥಿಗಳು ಜ್ಯಾಮಿತಿಯ ನಗರದ ಮಾದರಿಯನ್ನು ತಯಾರಿಸಿದ್ದರು.

ಈ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ  ರುಕ್ಮಯ್ಯ ದಾಸ್ ಹಾಗೂ ನಿರ್ದೇಶಕಿ ಶ್ರೀಮತಿ ಲೀಲಾವತಿ ರುಕ್ಮಯ್ಯ ದಾಸ್, ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಶೋಭಾ ಕಿಶೋರ್, ಶಾಲಾ ಕಾರ್ಯದರ್ಶಿ  ಕಿಶೋರ್ ಕುಮಾರ್, ಸತೀಶ್ ರೈ, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗ , ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ಶ್ರೀಮತಿ ಜೋತ್ಸ್ನಾರವರು ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.