Breaking News

ಜ. 5 ರಂದು ಐನೆಕಿದುವಿನಲ್ಲಿ ಹಿರಿಯರ ಕ್ರೀಡಾಕೂಟ

Advt_Headding_Middle
Advt_Headding_Middle

ಸುಳ್ಯ ತಾಲ್ಲೂಕು ಹಿರಿಯರ ಕ್ರೀಡಾ ಸಂಘ ಪಂಜ, ಸಂಘಟನಾ ಸಮಿತಿ ಹಿರಿಯರ ಕ್ರೀಡಾಕೂಟ ಐನೆಕಿದು ಇವುಗಳ ಜಂಟಿ ಆಶ್ರಯದಲ್ಲಿ  ಸಂಘಟನೆಗಳ ಸಹಯೋಗದೊಂದಿಗೆ ಜ.5 ರಂದು 9 ನೇ ಹಿರಿಯರ ಕ್ರೀಡಾಕೂಟ 2020 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಐನೆಕಿದು ಇದರ ಶಾಲಾ ವಠಾರದಲ್ಲಿ ನಡೆಯಲಿದೆ.

ಕಡಬ, ಪುತ್ತೂರು, ಸುಳ್ಯ ತಾಲ್ಲೂಕುಗಳ ಕ್ರೀಡಾಪಟುಗಳು ಇದರಲ್ಲಿ ಭಾಗವಹಿಸಲಿದ್ದು ಮೂವತ್ತೈದು ವರ್ಷ ಮೇಲ್ಪಟ್ಟು ಐದು ವರ್ಷ ಅಂತರಗಳ ಹತ್ತು ವಿಭಾಗಗಳಿಗೆ ಪ್ರತಿ ವಿಭಾಗಕ್ಕೆ 1೦೦, 2೦೦, 4೦೦, 8೦೦, 15೦೦, 5೦೦೦ ಮೀ ಓಟ, 5೦೦೦ ಮೀ. (5ಕಿ.ಮೀ.) ನಡಿಗೆ, ಗುಂಡೆಸೆತ, ಈಟಿ ಎಸೆತ, ಚಕ್ರ ಎಸೆತ, ಉದ್ದಜಿಗಿತ, ಟ್ರಿಪ್ಪಲ್ ಜಂಪ್ , ಕ್ರಿಕೆಟ್ ಬಾಲ್ ಎಸೆತ ಹೀಗೆ
13 ಸ್ಪರ್ಧೆಗಳು ನಡೆಯಲಿದೆ. ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆ ನಡೆಯಲಿದ್ದು ಒಟ್ಟು 260 ಸ್ಪರ್ಧೆಗಳು ನಡೆಯಲಿದೆ. ಕ್ರೀಡಾಕೂಟವನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಉದ್ಘಾಟಿಸಲಿದ್ದು, ಹಿರಿಯರ ಕ್ರೀಡಾಕೂಟ ಸಂಘಟನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಜಿ.ಪಂ ಸದಸ್ಯೆ ಆಶಾ ತಿಮ್ಮಪ್ಪ, ಹರಿಹರ ಪಲ್ಲ ತಡ್ಕ ಗ್ರಾ.ಪಂ ಅಧ್ಯಕ್ಷ ಹಿಮ್ಮತ್ ಕೆ ಸಿ ಮತ್ತಿತರರು ಉಪಸ್ಥಿತರಿರುವರು.
೫೦೦೦ಮೀ. ನಡಿಗೆ ಮತ್ತು ೫೦೦೦ಮೀ. ಓಟವನ್ನು ಎಲ್ಲಾ ವಯೋಮಾನದ ಪುರುಷ ಮತ್ತು ಮಹಿಳೆಯರಿಗೆ ಪೂ.೭ ಕ್ಕೆ ಪ್ರಾರಂಭಿಸಲಾಗುವುದು ಹಾಗೂ ಸ್ಪರ್ಧಾಳುಗಳಿಗೆ ಬೆಳಗ್ಗಿನ ಉಪಹಾರ ಹಾಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆಯಿರುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ. ಮಾಹಿತಿಗಾಗಿ
೯೪೪೮೭೭೦೭೧೬, ೯೬೮೬೦೦೦೦೯೭, ೯೪೪೯೯೯೯೪೯೩, ೮೭೬೨೯೨೫೯೪೫ ನಂಬರ್ ಗಳನ್ನು ಸಂಪರ್ಕಿಸಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.