Breaking News

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಜಾತ್ರೋತ್ಸವ ಪ್ರಾರಂಭ

Advt_Headding_Middle
Advt_Headding_Middle

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಜ. 03 ರಂದು ರಾತ್ರಿ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ಮಾರ್ಗದರ್ಶನದಲ್ಲಿ ಧ್ವಜಾರೋಹಣ ನಡೆದು ಜಾತ್ರೋತ್ಸವ ಪ್ರಾರಂಭಗೊಂಡಿತು.
ಬೆಳಿಗ್ಗೆ ಉಗ್ರಾಣ ಮುಹೂರ್ತ ನಡೆಯಿತು.

ಸಂಜೆ ಪನ್ನೆಬೀಡು ನಾಲ್ಕು ಸ್ಥಾನ ದೈವಗಳ ಚಾವಡಿಯಿಂದ ಬಲ್ಲಾಳರ ಪಯ್ಯೋಳಿ ತರಲಾಯಿತು.

ರಾತ್ರಿ ಕುಕ್ಕನ್ನೂರು ದೈವಗಳ ಭಂಡಾರ ಬಂದ ಬಳಿಕ ಧ್ವಜಾರೋಹಣ ನಡೆಯಿತು.ನಂತರ ಶ್ರೀ ಚೆನ್ನಕೇಶವರಿಗೆ ವಿಶೇಷ ಪೂಜೆ ನಡೆದು ದೇವರ ಉತ್ಸವ ಬಲಿ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ,ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕಸದಸ್ಯರಾದ ಲಿಂಗಪ್ಪ ಗೌಡ ಕೇರ್ಪಳ,ಕೆ.ಉಪೇಂದ್ರ ಕಾಮತ್,ಶ್ರೀಮತಿ ಎಂ.ಮೀನಾಕ್ಷಿ ಗೌಡ,ಎನ್.ಎ.ರಾಮಚಂದ್ರ,ಎನ್.ಜಯಪ್ರಕಾಶ್ ರೈ,ಎ.ರಮೇಶ ಬೈಪಾಡಿತ್ತಾಯ ಹಾಗೂ ನೂರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.