Breaking News

ಅಜ್ಜಾವರ ಪ್ರೌಢಶಾಲೆಯಲ್ಲಿ ಅಕ್ಷರ ಕಾರ್ಯಕ್ರಮ

Advt_Headding_Middle
Advt_Headding_Middle

ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಅಕ್ಷರ ಫೌಂಡೇಶನ್ ಮೈಸೂರು ಹಾಗೂ ಮಂಗಳೂರು, ಗ್ರಾಮ ಪಂಚಾಯತ್ ಅಜ್ಜಾವರ ಮತ್ತು ಸರ್ಕಾರಿ ಫ್ರೌಢಶಾಲೆ ಅಜ್ಜಾವರ ಸುಳ್ಯ ಇವರ ಸಹಯೋಗದಲ್ಲಿ ಸರ್ಕಾರಿ ಫ್ರೌಢಶಾಲೆ ಅಜ್ಜಾವರದಲ್ಲಿ ವಿದ್ಯಾರ್ಥಿಗಳ ಕಲಿಕೆಯ ಸಾಮರ್ಥ್ಯವನ್ನು ದ್ವಿಗುಣಗೊಳಿಸುವುದು ಹೇಗೆ ಕುರಿತಾದ “ಅಕ್ಷರ ಕಾರ್ಯಕ್ರಮ” ಡಿ. ೨೮ ರಂದು ಜರುಗಿತು.


ಮುಖ್ಯೋಪಾಧ್ಯಾಯರಾದ ನಾಗರಾಜು ಎಂ.ಕೆ ಅಧ್ಯಕ್ಷತೆ ವಹಿಸಿದ್ದರು. ಅಕ್ಷರ ಫೌಂಡೇಶನ್‌ನ ಸುಳ್ಯ ಶಾಖೆಯ ಸಂಯೋಜಕರಾದ ದೇವಿ ಪ್ರಸಾದ್, ಸಂಪನ್ಮೂಲ ವ್ಯಕ್ತಿ ಸುನಿಲ್,ಶಿಕ್ಷಕ, ಶಿಕ್ಷಕಿಯರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುನಿಲ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಪೋಷಕರು ಮತ್ತು 59 ವಿದ್ಯಾರ್ಥಿಗಳು  ಭಾಗವಹಿಸಿದರು. ಅಪರಾಹ್ನ ಆಯ್ದ ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆ ನಡೆಸಲಾಯಿತು.
ಈ ಕಾರ್‍ಯಕ್ರಮಕ್ಕೆ ಅಜ್ಜಾವರ ಗ್ರಾಮ ಪಂಚಾಯತ್ ನ ಅಧ್ಯಕ್ಷರು, ಉಪಾಧ್ಯಕ್ಷರು,ಎಲ್ಲಾ ಸದಸ್ಯರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಅನುದಾನವನ್ನು ಒದಗಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.