ಸುಳ್ಯ ಶಾರದಾ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ

Advt_Headding_Middle
Advt_Headding_Middle

ಸುಳ್ಯದ ಶ್ರೀ ಶಾರದಾ ಹೆಮ್ಮಕ್ಕಳ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವವು ಜ.4 ರಂದು ಸುಳ್ಯದ ಅಮೃತಭವನದಲ್ಲಿ ನಡೆಯಿತು.


ಮಾಜಿ ಸಚಿವ ಯು.ಟಿ.ಖಾದರ್ ವಾರ್ಷಿಕೋತ್ಸವವನ್ನು ಉದ್ಘಾಟಿಸಿದರು. ದ.ಕ. ಗೌಡ ವಿದ್ಯಾಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ನ್ಯೂಸ್ 18  ವರದಿಗಾರ ಚಂದ್ರಶೇಖರ ಮಂಡೆಕೋಲು ಮುಖ್ಯ ಭಾಷಣಗಾರರಾಗಿದ್ದರು. ಶ್ರೀ ಶಾರದಾ ಹೆಮ್ಮಕ್ಕಳ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಪ್ರೇಮಲತಾ ಎ.ಹೆಚ್.ರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸುಳ್ಯ ನಗರ ಪಂಚಾಯತ್ ಸದಸ್ಯ ಡೇವಿಡ್ ಧೀರಾ ಕ್ರಾಸ್ತ, ದ.ಕ. ಗೌಡ ವಿದ್ಯಾಸಂಘದ ಕಾರ್ಯದರ್ಶಿ ಡಾ| ಬಿ.ರೇವತಿ ನಂದನ್, ಕೋಶಾಧಿಕಾರಿ ಮಾಧವ ಗೌಡ ಬೆಳ್ಳಾರೆ, ದೇವದಾಸ್ ಕೂಜುಗೋಡು, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ರಹಿಲ, ಧನ್ಯಶ್ರೀ ಕೆ, ವಾಣಿಶ್ರೀ ಪಿ.ಬಿ., ದ.ಕ. ಗೌಡ ಸಂಘದ ನಿರ್ದೇಶಕರುಗಳಾದ ಡಾ| ಸಾಯಿಗೀತಾ, ಕಾಳಿಪ್ರಸಾದ್ ಮುಂಡೋಡಿ, ಕಿಶೋರ್ ಕುಮಾರ್ ನೆಲ್ಲಿಕಟ್ಟೆ, ಡಿ.ಎಂ. ಗೌಡ, ಶ್ರೀಮತಿ ತಂಗಮ್ಮ, ಹೈಸ್ಕೂಲ್ ವಿಭಾಗ ಮುಖ್ಯಗುರು ಶ್ರೀಮತಿ ಸುಮಲತ ಇದ್ದರು.
ಪದವಿ ಕಾಲೇಜು ಪ್ರಾಂಶುಪಾಲೆ ಶ್ರೀಮತಿ ಜ್ಯೋತ್ಸ್ನಾ ಸ್ವಾಗತಿಸಿ, ಪದವಿ ಪೂರ್ವ ಪ್ರಾಂಶುಪಾಲೆ ಶ್ರೀಮತಿ ದಯಾಮಣಿ ವರದಿ ಮಂಡಿಸಿದರು. ಉಪನ್ಯಾಸಕರುಗಳಾದ ದಾಮೋದರ ಹಾಗೂ ಸ್ವರ್ಣಕಲ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.