ಸುಳ್ಯದ ಸಂಶೀರ್ ಎಸ್.ಇ. ಇವರಿಗೆ ಗೌರವ ಅತಿಥ್ಯ ಹಾಗೂ ಸನ್ಮಾನ

Advt_Headding_Middle
Advt_Headding_Middle


ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಅಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದರೆ ಜಂಟಿಯಾಗಿ 80 ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಆಯೋಜಿಸಲಾಗಿತ್ತು.

ಅಸೋಸಿಯೇಷನ್ ​​ಆಫ್ ಇಂಡಿಯನ್ ಯೂನಿವರ್ಸಿಟೀಸ್ (ಎಐಯು) ಆಶ್ರಯದಲ್ಲಿ ಜನವರಿ 2 ರಿಂದ 6 ರವರೆಗೆ  ಸ್ವರಾಜ್ ಮೈದಾನದಲ್ಲಿ ಕ್ರೀಡಾಕೂಟ ನಡೆಯಿತು. ಈ ಕಾರ್ಯಕ್ರಮದ  ಮುಖ್ಯ ಅತಿಥಿಯಾಗಿ ಸಂಶೀರ್ ಎಸ್.ಇ ಭಾಗವಹಿಸಿದರು.

ಈ ಅಥ್ಲೆಟಿಕ್ಸ್ ನಲ್ಲಿ ಭಾರತದಾದ್ಯಂತ 400 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಸುಮಾರು 5000 ಕ್ರೀಡಾಪಟುಗಳು ಭಾಗವಹಿಸಿದ್ದ ಕ್ರೀಡಾಕೂಟದಲ್ಲಿ ಸಾಧನೆಗೈದವರಿಗೆ ಸಂಶೀರ್ ಎಸ್.ಇ ಯವರು ಪದಕ ನೀಡಿ ಗೌರವಿಸಿದರು.
ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಧನೆಗಳೊಂದಿಗೆ ಸಂಸ್ಥೆಗೆ ವೈಭವ ತಂದುಕೊಟ್ಟ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಈ ಸಮಾರಂಭದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕ ಪಡೆದುಕೊಂಡ, ಭಾರತವನ್ನು ಪ್ರತಿನಿಧಿಸಿದ ಸುಳ್ಯದ ಯುವ ಕುವರ ಸಂಶೀರ್ ಎಸ್.ಇ ಇವರನ್ನು ತಮ್ಮ ವೈಯುಕ್ತಿಕ ಸಾಧನೆಗಾಗಿ ಸನ್ಮಾನಿಸಲಾಯಿತು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.