ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ

Advt_Headding_Middle
Advt_Headding_Middle

 

ನೂತನ ಪಾಕಶಾಲೆ ಹಾಗೂ ಕೊಠಡಿ ಉದ್ಘಾಟನೆ

ಸಂಸ್ಕಾರಯುತ ಶಿಕ್ಷಣ ಇಂದಿನ ಅನಿವಾರ್ಯತೆ : ರಾಮಮೂರ್ತಿ

ಶಿಕ್ಷಣ ಸಂಸ್ಥೆಗಳನ್ನು ನಡೆಸುವುದೇ ಸಾಹಸದ ಕಾರ್ಯ.‌ ಗುಣ ಮಟ್ಟದ ಮತ್ತು ಸಂಸ್ಕಾರಯುತ ಶಿಕ್ಷಣ ನೀಡುವುದರ ಜತೆಗೆ‌ ಮಕ್ಕಳನ್ನು ಸರ್ವಾಂಗೀಣವಾಗಿ ಬೆಳೆಸುತ್ತಿರುವ ಜ್ಞಾನದೀಪ ವಿದ್ಯಾ ಸಂಸ್ಥೆ ಮಾದರಿ ಕಾರ್ಯ ಮಾಡುತ್ತಿದೆ ಎಂದು ರಾಜ್ಯ ಸಭಾ ಸದಸ್ಯ ಕೆ.ಸಿ.ರಾಮ ಮೂರ್ತಿ ಹೇಳಿದ್ದಾರೆ.

ಜ.4 ರಂದು ನಡೆದ ಎಲಿಮಲೆಯ ಜ್ಞಾನದೀಪ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ ಕಾರ್ಯಕ್ರಮದ ಸಂದರ್ಭ ನೂತನ ಪಾಕಶಾಲೆ ಹಾಗೂ ಕೊಠಡಿ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಶಾಸಕ ಎಸ್.ಅಂಗಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೂಕ್ತ ಶಿಕ್ಷಣ ನೀತಿಯನ್ನು ಜಾರಿಗೆ ತರುವುದೇ ಶಿಕ್ಷಣ ಕ್ಷೇತ್ರದ ಗೊಂದಲಕ್ಕೆ ಪರಿಹಾರ ಎಂದರು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವಾಧ್ಯಕ್ಷ ನಿತ್ಯಾನಂ ದ ಮುಂಡೋಡಿ ಮಾತನಾಡಿ, ಇಂದಿನ ಮಕ್ಕಳಲ್ಲಿ ಸಂಸ್ಕಾರವನ್ನು ತುಂಬುವ ಕಾರ್ಯ ಶಿಕ್ಷಣ ಸಂಸ್ಥೆಗಳಿಂದಾಗಬೇಕು. ಭ್ರಷ್ಟಾಚಾರವನ್ನು ನಿಗ್ರಹಿಸುವ, ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ತಳ್ಳದಿರುವ ಮನಸ್ಥಿತಿಯನ್ನು ಮಕ್ಕಳು ಹೊಂದಬೇಕು ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಪ್ರಚಾರಕ ಜಯರಾಮ ಬೊಳ್ಳಾಜೆ, ರಾಜ್ಯ ಬಿಜೆಪಿ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು ಅತಿಥಿಗಳಾಗಿ ಉಪಸ್ಥಿತರಿದ್ದರು.

ಶಾಲಾ ಸಂಚಾಲಕ ಎ.ವಿ.ತೀರ್ಥರಾಮ ಸ್ವಾಗತಿಸಿ ಪ್ರಸ್ತಾವನೆಗೈದರು. ಸಂಸ್ಥೆಯ ಮುಖ್ಯ ಶಿಕ್ಷಕ ಗದಾಧರ ಬಾಳುಗೋಡು ವರದಿ ವಾಚಿಸಿದರು. ಕೃಷ್ಣಯ್ಯ ಮೂಲೆತೋಟ ವಂದಿಸಿದರು. ಶಿಕ್ಷಕಿಯರಾದ ಸುಮಾ ಪ್ರಸಾದ್ ಮತ್ತು ಶಾಲಿನಿ ಕಾರ್ಯಕ್ರಮ ನಿರೂಪಿಸಿದರು.

ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಭಟ್ ತಳೂರು, ಆಡಳಿತಾಧಿಕಾರಿ ಅನಿಲ್ ಅಂಬೆಕಲ್ಲು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಭಾಸ್ಕರ ರಾವ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಶ್ಚಿತ್ ಕೇಪಳಕಜೆ, ವಿದ್ಯಾರ್ಥಿ ನಾಯಕಿ ಅಖಿಲಾ ಎಂ.,ಆಡಳಿತ ಮಂಡಳಿ ನಿರ್ದೇಶಕರಾದ ರಾಧಾಕೃಷ್ಣ ಕೆ.ಆರ್. ಮಾವಿನಕಟ್ಟೆ , ಗಂಗಾಧರ ಕೇಪಳಕಜೆ, ಸದಸ್ಯರಾದ ಜಯಂತ ಅಂಬೆಕಲ್ಲು, ಮೋಹನ್ ರಾಂ ಸುಳ್ಳಿ, ಸೂರ್ಯನಾರಾಯಣ ಭಟ್ ಮೂಲೆತೋಟ, ಮಹಾವೀರ ಜೈನ್, ಡಿ.ಟಿ.ದಯಾನಂದ, ಶ್ರೀಕೃಷ್ಣ ಗುಂಡಿಮಜಲು, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ್ರೀಡಾ ಸಾಧನೆಗೆ ಕಾರಣರಾದ ದೈಹಿಕ ಶಿಕ್ಷಕಿ ದಿವ್ಯ ಬಾಳುಗೋಡು ಮತ್ತು ಸಾಧಕ ವಿದ್ಯಾರ್ಥಿಗಳನ್ನು ಮತ್ತು ಹಿರಿಯ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

* ಮನಸೂರೆಗೊಂಡ ಬಯಲು ಸಾಹಸ ಪ್ರದರ್ಶನ

* ಸಭಾ ಕಾರ್ಯಕ್ರಮದ ಬಳಿಕ ಹೊನಲು ಬೆಳಕಿನ ಸಾಹಸ, ಯೋಗ, ನೃತ್ಯ , ಕರಾಟೆ, ಬಯಲು ಪ್ರದರ್ಶನ ನಡೆದು ಸಾವಿರಾರು ಪ್ರೇಕ್ಷಕರ ಮನಸೂರೆಗೊಂಡಿತು. ದುರ್ಗಾಕುಮಾರ್ ನಾಯರ್ ಕೆರೆ ಮತ್ತು ಸುಷ್ಮಿತಾ ಕಡಪಳ ಕಾರ್ಯಕ್ರಮ ನಿರೂಪಿಸಿದರು.

* ಬೆಳಿಗ್ಗೆ ಎಲಿಮಲೆ ಸರಕಾರಿ ಪ್ರೌಢಶಾಲಾ ಶಿಕ್ಷಕ ಚಂದ್ರಶೇಖರ ಪೇರಾಲು ಧ್ವಜಾರೋಹಣಗೈದರು. ಚಂದ್ರಶೇಖರ ಭಟ್ ತಳೂರು ಅಧ್ಯಕ್ಷತೆ ವಹಿಸಿದ್ದರು.ದಿವಾಕರ ಮುಂಡೋಡಿ ಹಾಗೂ ದಿವಾಕರ ನಾಯಕ್ ಎರ್ಮೆಟ್ಟಿ ಅತಿಥಿಗಳಾಗಿದ್ದರು.

* ಶೈಕ್ಷಣಿಕ ಸಾಧನೆಗೆ ಕಾರಣರಾದ ಶಿಕ್ಷಕಿ ಹರ್ಷಿತಾರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ಪವಿತ್ರಾರವರಿಗೆ ಬೀಳ್ಕೊಡುಗೆ ನಡೆಯಿತು.

* ಮಧ್ಯಾಹ್ನ ಜ್ಞಾನದೀಪ ಶಾಲಾ ವಿದ್ಯಾರ್ಥಿಗಳಿಂದ ಸಂಗೀತ ರಸಮಂಜರಿ ನಡೆಯಿತು.

* ಅಪರಾಹ್ನ ವಿದ್ಯಾರ್ಥಿಗಳಿಂದ ಕಾರ್ತವೀರ್ಯಾರ್ಜುನ ಯಕ್ಷಗಾನ ಪ್ರದರ್ಶನಗೊಂಡಿತು.

ವಾರ್ಷಿಕೋತ್ಸವ ಮತ್ತು ಬಯಲು ಪ್ರದರ್ಶನದ ಹಿನ್ನಲೆಯಲ್ಲಿ ಇಡೀ ಶಾಲೆ ಹಾಗೂ ಪರಿಸರವನ್ನು ವಿದ್ಯುದ್ದೀಪಗಳಿಂದ ಬೆಳಗಿಸಲಾಗಿತ್ತು.

ಸುದ್ದಿ ನ್ಯೂಸ್ ನೇರಪ್ರಸಾರ
ಹತ್ತು ಸಾವಿರಕ್ಕಿಂತಲೂ ಹೆಚ್ಚು ವೀಕ್ಷಣೆ

ಜ್ಞಾನದೀಪ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವದ ಅಂಗವಾಗಿ ನಡೆದ ಹೊನಲು ಬೆಳಕಿನ ಬಯಲು ಪ್ರದರ್ಶನವನ್ನು ಸುದ್ದಿ ವೆಬ್ ಸೈಟ್ ಮತ್ತು ಯೂ ಟ್ಯೂಬ್ ಚಾನೆಲ್ ಮೂಲಕ ನೇರ ಪ್ರಸಾರ ಮಾಡಲಾಗಿತ್ತು. ಇದುವರೆಗೆ ಇದನ್ನು ಹತ್ತು ಸಾವಿರಕ್ಕಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಇನ್ನು ಕೂಡಾ ವೀಕ್ಷಿಸಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.