HomePage_Banner
HomePage_Banner

ಆಲೆಟ್ಟಿ: ಮೊರಂಗಲ್ಲು ಬಳಿ ಹಾಡು ಹಗಲು ಮನೆಗೆ ನುಗ್ಗಿದ ಕಳ್ಳರು

 

ಆಲೆಟ್ಟಿ ಮೊರಂಗಲ್ಲು ಎಂಬಲ್ಲಿ ಸುಳ್ಯದ ಆಯ್ಯಶಿಲ್ಪ ಇಂಡಸ್ಟ್ರೀಸ್ ನ ಉದ್ಯೋಗಿ ವೆಂಕಟ್ರಮಣ ಗೌಡರವರ ಮನೆಗೆ ಹಾಡು ಹಗಲೇ ಕಳ್ಳರು ಬಾಗಿಲು ಒಡೆದು ಒಳಗೆ ನುಗ್ಗಿ ಕಪಾಟುಗಳ ಬೀಗ ಹೊಡೆದು ವಸ್ತು ಗಳನ್ನು ತಡಕಾಡಿ ಬರಿಗೈಯಲ್ಲಿ ತೆರಳಿರುವ ಘಟನೆ ವರದಿಯಾಗಿದೆ. ಮನೆಯವರು ಕುಂಚಡ್ಕಕ್ಕೆ ಸತ್ಯನಾರಾಯಣ ಪೂಜೆ ಗೆಂದು ತೆರಳಿದ ವೇಳೆಯಲ್ಲಿ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಕಳ್ಳರು ಹೊಂಚು ಹಾಕಿ ಕದಿಯಲು ಬಂದಿರಬಹುದು ಎಂದು ಸ್ಥಳೀಯರು ಹೇಳುತ್ತಾರೆ. ಮನೆಯ ಒಳಗೆ ತಡಕಾಡಿ ಏನು ಸಿಗದೇ ಅಲ್ಲಿದ್ದ ಮೊಬೈಲ್ ಫೋನ್ ನ್ನು ತೆಗೆದುಕೊಂಡು ಹೋಗಿದ್ದಾರೆ. ವೆಂಕಟ್ರಮಣ ರವರ ಮಗ ಕೋಚಿಂಗ್ ಕ್ಲಾಸ್ ಗೆ ಹೋಗಿ ಬಂದು ನೋಡಿದಾಗ ಬಾಗಿಲು ಮುರಿದು ಕಳ್ಳರು ಒಳ ನುಗ್ಗಿರುವುದನ್ನು ಗಮನಿಸಿ ವಿಷಯ ತಿಳಿಸಿ ದರು. ವಿಷಯ ತಿಳಿದು ನೆರೆ ಮನೆಯ ನಿವಾಸಿ ಮುತ್ತಪ್ಪ ಪೂಜಾರಿ ಯವರು ಪೋಲಿಸ್ ಠಾಣೆಗೆ ವಿಷಯ ತಿಳಿಸಿ ದೂರು ದಾಖಲಿಸಿದರು. ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿ ದೂರು ದಾಖಲಿಸಿಕೊಂಡಿರುವುದಾಗಿ ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.