ಸರಕಾರಿ ರಸ್ತೆಗೆ ಕಲ್ಲು ಕಟ್ಟಿ ತಡೆ ತೆರವುಗೊಳಿಸಲು ತಹಶೀಲ್ದಾರ್ ಗೆ ಮನವಿ

Advt_Headding_Middle
Advt_Headding_Middle


ತನ್ನ ಭೂಮಿಗೆ ಬರುವ, ವಾಹನ ಸಂಚಾರ ಯೋಗ್ಯ ಸರಕಾರಿ ರಸ್ತೆಯನ್ನು ತನ್ನ ಪಕ್ಕದ ತೋಟದವರು ಕಲ್ಲು ಕಟ್ಟಿ ಬಂದ್ ಮಾಡಿದ್ದು , ಅದನ್ನು ತೆರವುಗೊಳಿಸಿ ಕೊಡಬೇಕೆಂದು ಕೊಲ್ಲಮೊಗ್ರದ ಕಟ್ಟ ಕೃಷ್ಣಮೂರ್ತಿ ಯವರು ತಹಶೀಲ್ದಾರ್ ರಿಗೆ ಮನವಿ ಸಲ್ಲಿಸಿದ್ದಾರೆ.

1949 ರಲ್ಲಿ ಮಂಜಯ್ಯ ಎಂಬವರಿಗೆ ದರ್ಖಾಸ್ತು ಮಂಜೂರು ಮಾಡುವಾಗಲೇ ಈ ರಸ್ತೆಯನ್ನು ಸಾರ್ವಜನಿಕ ಉಪಯೋಗಕ್ಕೆಂದು ಸರಕಾರ ಕಾದಿರಿಸಿತ್ತು. ನಾನು ಆ ರಸ್ತೆಯನ್ನು ನಿರಂತರ ಉಪಯೋಗ ಮಾಡುತ್ತಿದ್ದೆ. ಆದರೆ ಕಳೆದ ದ.29 ರಂದು ಮಂಜಯ್ಯರವರ ಮಗ ಚಂದ್ರಶೇಖರ ಕೆ.ಎಂ. ಮತ್ತು ಚಂದ್ರಶೇಖರರ ಮಗ ಕಾರ್ತಿಕೇಯ ಕೆ.ಸಿ. ಸೇರಿ 10- 15 ಜನರೊಂದಿಗೆ ಅಕ್ರಮ ಪ್ರವೇಶ ಮಾಡಿ , ಬಲಾತ್ಕಾರವಾಗಿ 2 ಕಡೆಗಳಲ್ಲಿ ಕಲ್ಲು ಕಟ್ಟಿ ರಸ್ತೆ ಬಂದ್ ಮಾಡಿದ್ದಾರೆ. ಅಲ್ಲದೆ ನನ್ನ ಸ್ಥಳದಲ್ಲಿದ್ದ ರಸ್ತೆ ಸಂಪರ್ಕದ ಗೇಟನ್ನು ಕದ್ದೊಯ್ದಿದ್ದಾರೆ. ಆದ್ದರಿಂದ ಈ ರಸ್ತೆ ತಡೆಯನ್ನು ನಿವಾರಿಸಿ , ರಸ್ತೆಯನ್ನು ಸಾರ್ವಜನಿಕ ಉಪಯೋಗಕ್ಕೆ ಮುಕ್ತವಾಗಿರಿಸಬೇಕು ” ಎಂದು ಕೃಷ್ಣಮೂರ್ತಿಯವರು ಮನವಿಯಲ್ಲಿ ಕೇಳಿಕೊಂಡಿದ್ದಾರೆ. ತನ್ನ ಮನವಿಗೆ ತಹಶೀಲ್ದಾರ್ ಸಕಾರಾತ್ಕವಾಗಿ ಸ್ಪಂದಿಸಿದ್ದಾರೆಂದು ಅವರು ತಿಳಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.