Breaking News

ಪಂಜ : ಸೇನೆಗೆ ಸೇರಲಿಚ್ಚಿಸುವವರಿಗೆ ತರಬೇತಿ ಶಿಬಿರ

Advt_Headding_Middle
Advt_Headding_Middle

 

ಲಯನ್ಸ್ ಕ್ಲಬ್ ಪಂಜ ಇದರ ಆಶ್ರಯದಲ್ಲಿ ಭಾರತೀ ಸೇನೆಗೆ ಸೇರಲ್ಚಿಸುವವರಿಗೆ ತರಬೇತಿ ಶಿಬಿರ ಡಿ.28 ರಂದು ಪಂಜ ಸ.ಪ.ಕಾಲೇಜು ಸಭಾಭವನದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಶ್ ಕುಮಾರ್ ನಡ್ಕರವರ ಅಧ್ಯಕ್ಷತೆಯಲ್ಲಿ ಜರುಗಿತು.

ಲಯನ್ಸ್ ಜಿಲ್ಲಾ ರಾಜ್ಯಪಾಲರ ಪ್ರಾಂತೀಯ ಪ್ರತಿನಿಧಿ ಡಾ.ಪ್ರಕಾಶ್ ಡಿಸೋಜ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭೂ ಸೇನೆಯ ತಾಂತ್ರಿಕ ವಿಭಾಗದ ನಿವೃತ್ತ ಯೋಧ ಕೆ.ಪಿ.ಜಗದೀಶ್ ,ನಿವೃತ್ತ ಯೋಧರಾದ ಕುಸುಮಾಧರ ಬೇರ್ಯ ,ಶರತ್ ಬಿ ಯಂ, ಟಿ.ಜಿ.ಮ್ಯಾಥ್ಯೂ, ಮಾಧವ ಗೌಡ ಬೇರ್ಯ ಹಾಗೂ ಪ್ರಾಂಶುಪಾಲ ಪ್ರಭಾಕರ ಕಿರಿಭಾಗ, ಮುಖ್ಯ ಶಿಕ್ಷಕ ಶಶಿಧರ ಪರಮಲೆ,ಲಯನ್ಸ್ ಕ್ಲಬ್ ಖಜಾಂಜಿ ಕುಸುಮಾಧರ ಕೆಮ್ಮೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಜಾಕೆ ಮಾಧವ ಗೌಡ, ಶ್ರೇಯಾಂಸ್ ಕುಮಾರ್, ಬಾಲಕೃಷ್ಣ ಮೂಲೆಮನೆ, ಸುಚಿನ್ನ ಕಾಣಿಕೆ, ಶಿಕ್ಷಕೆರು, ಉಪನ್ಯಾಸಕರು ಉಪಸ್ಥಿತರಿದ್ದರು.ಎಸ್ ಎಸ್ ಪಿ ಯು ಸುಬ್ರಹ್ಮಣ್ಯ, ಏನೆಕಲ್ಲು ಹೈಸ್ಕೂಲು, ಬೆಳ್ಳಾರೆ ಪದವಿ ಪೂರ್ವ, ಎಣ್ಮೂರು ಹೈಸ್ಕೂಲು, ಪಂಜ ಹೈಸ್ಕೂಲು,ಕಾಲೇಜಿನ ಸುಮಾರು ೨೫೦ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸುರೇಶ್ ಕುಮಾರ್ ನಡ್ಕ ಸ್ವಾಗತಿಸಿದರು. ಪುರಂದರ ಪನ್ಯಾಡಿ ನಿರೂಪಿಸಿದರು. ಮಹಾಬಲ ಕುಳ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.