ಪೇರಾಲು ಮೈತಡ್ಕ ಪಯಸ್ವಿನಿ ಕ್ರೀಡಾ ಮತ್ತು ಕಲಾ ಸಂಘದ ರಜತ ಸಂಭ್ರಮ

Advt_Headding_Middle
Advt_Headding_Middle

ಊರಿನ ಸಾಧಕರಿಗೆ ಮತ್ತು ನಿವೃತ್ತ ಯೋಧರಿಗೆ ಸನ್ಮಾನ


ಪಯಸ್ವಿನಿ ಕ್ರೀಡಾ ಮತ್ತು ಕಲಾ ಸಂಘ ಪೇರಾಲು ಮೈತಡ್ಕ ಹಾಗೂ ಪಯಸ್ವಿನಿ ಯುವತಿ ಸಂಘ ಪೇರಾಲು ಮೈತಡ್ಕ ಇದರ ಸಹಯೋಗದಲ್ಲಿ ಕಲಾ ಸಂಘದ ರಜತ ಸಂಭ್ರಮ ಕಾರ್ಯಕ್ರಮವು ನಡೆಯಿತು.

ಸಭಾ ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಉದ್ಘಾಟಿಸಿದರು. ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ಪೇರಾಲು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಯೋಜಕ ಡಾ. ಸುಂದರ ಕೇನಾಜೆ ಸಮಾರೋಪ ಸಂದೇಶ ನೀಡಿದರು.


ಮಂಡೆಕೋಲು ಗ್ರಾಮಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮೋಹಿನಿ ಚಂದ್ರಶೇಖರ ಗ್ರಾ.ಪಂ. ಸದಸ್ಯ ಸುಂದರ ಗೌಡ ಕಾಡುಸೊರಂಜ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಶಂಕರ ಪೆರಾಜೆ, ಪತ್ರಕರ್ತ ದುರ್ಗಾಕುಮಾರ್ ನಾಯರ್‌ಕೆರೆ, ಶ್ರೀಕ್ಷೇತ್ರ ಬಜಪ್ಪಿಲದ ಅನುವಂಶಿಕ ಆಡಳಿತ ಮೊಕ್ತೇಸರ ಹೇಮಂತ್‌ಕುಮಾರ್ ಗೌಡರ ಮನೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಒಕ್ಕೂಟದ ಸೇವಾ ಪ್ರತಿನಿಧಿ ಜಯಪ್ರಕಾಶ್ ಕೊಡೆಂಚಿಕಾರ್, ವನ್ಯಜೀವಿ ವಲಯದ ಅರಣ್ಯ ರಕ್ಷಕ ನಾಗೇಶ್ ಪಂಜಿಮಲೆ, ಮೈತಡ್ಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮನಮೋಹನ್ ಕಾಜಿಗುಂಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಪಯಸ್ವಿನಿ ಕ್ರೀಡಾ ಮತ್ತು ಕಲಾ ಸಂಘದ ಅಧ್ಯಕ್ಷ ಚಂದ್ರಶೇಖರ ಕೇನಾಜೆ, ಪಯಸ್ವಿನಿ ಯುವತಿ ಸಂಘದ ಅಧ್ಯಕ್ಷೆ ಯಶ್ಮಿತಾ ಪೇರಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಊರ ಸಾಧಕರಾದ ತಮ್ಮಯ್ಯ ಗೌಡ ಹಂಡನಮನೆ (ನಾಟಿವೈದ್ಯ), ಚಂದ್ರಶೇಖರ ಪೇರಾಲು (ಶಿಕ್ಷಣ), ದುಗ್ಗಪ್ಪ ಗೌಡ ಕೇನಾಜೆ (ಕೃಷಿ), ಶ್ರೀಮತಿ ಹೇಮಾವತಿ (ಆರೋಗ್ಯ ಸೇವೆ), ಡಿ.ಸಿ.ಬಾಲಚಂದ್ರ, ಶ್ರೀಮತಿ ತುಳಸಿನಿ ಬಾಲಚಂದ್ರ ದೇವರಗುಂಡ, ರಾಕೇಶ್ ರೈ ಬೋಳೋಡಿಗುತ್ತು (ಕ್ರೀಡೆ), ಮೋನಿಷಾ ಆಳಂಕಲ್ಯ (ಬಾಲಪ್ರತಿಭೆ) ಅವರನ್ನು ಸನ್ಮಾನಿಸಲಾಯಿತು.
ಪೇರಾಲು -ಅಂಬ್ರೋಟಿ ವ್ಯಾಪ್ತಿಯ ನಿವೃತ್ತ ಯೋಧರಾದ ದೇರಣ್ಣ ಗೌಡ ಅಡ್ಡಂತ್ತಡ್ಕ, ಉತ್ತಪ್ಪ ಗೌಡ ಮುಂಡೋಡಿ, ಸುಭಾಶ್ಚಂದ್ರ ಸೊರಂಜ, ಗುರುಪ್ರಸಾದ್ ರೈ ಪೇರಾಲುಗುತ್ತು, ಋಷಿಕುಮಾರ್ ರೈ ಪೇರಾಲುಗುತ್ತು, ಉಮಾನಾಥ ಕುಕ್ಕುಡೇಲು, ರಾಘವ ಆಳಂಕಲ್ಯ, ಚೆನ್ನಪ್ಪ ಗೌಡ ಅತ್ಯಾಡಿ, ಕುಶಾಲಪ್ಪ ಕುಕ್ಕೆಟ್ಟಿ, ವಿಶ್ವನಾಥ ಚೌಟಾಜೆ, ಹರೀಶ್ ಸೊರಂಜ, ಭರತ್ ಅತ್ಯಾಡಿ ಸನ್ಮಾನಿಸಲಾಯಿತು.
ರಜತಮಹೋತ್ಸವ ಸಮಿತಿ ಗೌರವಾಧ್ಯಕ್ಷ ರಾಮಚಂದ್ರ ಮಾಸ್ತರ್ ಕೇನಾಜೆ ಸ್ವಾಗತಿಸಿದರು. ಶಿವರಾಮ ಮಾಸ್ತರ್ ಕೇನಾಜೆ ಕಾರ್ಯಕ್ರಮ ನಿರೂಪಿಸಿ, ನವೀನ್‌ಕುಮಾರ್ ಯಾವಟೆ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.