Breaking News

ಸದ್ಭಾವನೆಯಿಂದ ಸೌಹಾರ್ದತೆಯೆಡೆಗೆ…

Advt_Headding_Middle
Advt_Headding_Middle

ಎನ್ನೆಂಸಿ ರೆಡ್‌ಕ್ರಾಸ್ ಘಟಕದಲ್ಲಿ ಕಾರ್ಯಕ್ರಮ

ಸದ್ಭಾವನೆ ಮತ್ತು ಸೌಹಾರ್ದತೆ ಎಂಬುದು ಬದುಕಿನ ಸಹಜ ಮೌಲ್ಯಗಳಾಗಬೇಕು. ಸೃಷ್ಟಿಯನ್ನು ಬದಲಾಯಿಸುವುದು ನಮಗೆ ಸಾಧ್ಯವಿಲ್ಲ, ಆದರೆ ನೋಡುವ ದೃಷ್ಟಿಯನ್ನು ಬದಲಾಯಿಸಿಕೊಂಡರೆ ಸೌಹಾರ್ದ ಸಮಾಜ ಕಟ್ಟಲು ಸಾಧ್ಯವಿದೆ. ನಾವು ಪರಸ್ಪರ ದ್ವೀಪಗಳಾಗದೇ ದೀಪಗಳಾಗಬೇಕು ಎಂದು ಪತ್ರಕರ್ತ, ಲೇಖಕ ದುರ್ಗಾಕುಮಾರ್ ನಾಯರ್‌ಕೆರೆ ಅಭಿಪ್ರಾಯಪಟ್ಟರು.


ಅವರು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವರೆಡ್ ಕ್ರಾಸ್ ಘಟಕದ ವತಿಯಿಂದ ಹಮ್ಮಿಕೊಂಡ “ಸದ್ಭಾವನೆಯಿಂದ ಸೌಹಾರ್ದತೆಯೆಡೆಗೆ” ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಕಾಲೇಜಿನ ರೆಡ್‌ಕ್ರಾಸ್‌ನ ಕಾರ್ಯವೈಖರಿಯನ್ನು ಶ್ಲಾಘಿಸಿದ ಅವರು, ರೆಡ್‌ಕ್ರಾಸ್‌ಘಟಕದ ಹಿಂದೆ ಸದ್ಭಾವನೆ ಮತ್ತು ಸೌಹಾರ್ದತೆ ಎನ್ನುವ ಆಶಯ ಇದೆ. ಇದು ಭಾಷಣಕ್ಕೆ ಮಾತ್ರ ಸೀಮಿತಗೊಳ್ಳದೇ ನಿತ್ಯಜೀವನದಲ್ಲಿ ಅನುಷ್ಠಾನಕ್ಕೆ ಬಂದಾಗ ಇಂತಹ ಕಾರ್ಯಕ್ರಮಗಳು ಸಾರ್ಥಕತೆಯನ್ನು ಪಡೆದುಕೊಳ್ಳುತ್ತವೆ ಎಂದರು.


ಬಹುಸಂಸ್ಕೃತಿಯ ವೈವಿಧ್ಯತೆಯಿಂದ ಕೂಡಿದ ಈ ನಾಡಿನಲ್ಲಿ ನಮ್ಮ ಬದುಕನ್ನು ಕಟ್ಟಿಕೊಳ್ಳುವಂತದು ಸದ್ಭಾವನೆ ಮತ್ತು ಸೌಹಾರ್ದತೆಯ ಮೂಲಕ. ಈ ಮೌಲ್ಯಗಳನ್ನು ನಾವು ಬೇರೆಲ್ಲೋ ಹುಡುಕುವುದಲ್ಲ, ಅದು ನಮ್ಮೊಳಗೆ ಇದೆ. ನಮ್ಮೊಳಗಿನ ಜ್ಞಾನದ, ಅರಿವಿನ, ಸದ್ಭಾವನೆಯ ಬೆಳಕನ್ನು ಶೋಧಿಸುವ ಕೆಲಸ ಮಾಡಬೇಕು. ಅದಕ್ಕಾಗಿ ಆಂತರ್ಯದ ಕಣ್ಣನ್ನು ತೆರೆಯಬೇಕು. ಒಬ್ಬ ವ್ಯಕ್ತಿಯನ್ನು ದ್ವೇಷ ಮಾಡಲು ನೂರು ಕಾರಣ ಸಿಗಬಹುದು. ಆದರೆ ಒಬ್ಬ ವ್ಯಕ್ತಿಯನ್ನು ಪ್ರೀತಿ ಮಾಡಲು ಒಂದು ಕಾರಣವಾದರೂ ಸಿಗಬೇಕು. ಆ ಒಂದುಕಾರಣವಾದರೂ ನಮ್ಮಿಂದ ಹುಡುಕಲು ಸಾಧ್ಯವಾದರೆ ಸೌಹಾರ್ದಯುತವಾಗಿ ಬದುಕು ನಡೆಸುವುದು ಸಾಧ್ಯವಿದೆಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಸತ್ಯಪ್ರಕಾಶ್ ಡಿ ಮಾತನಾಡಿ, ಎಲ್ಲರೂ ಸದ್ಭಾವನೆಯಿಂದ ವರ್ತಿಸಿದರೆ, ದೇಶದಲ್ಲಿ ನಡೆಯುವ ಅದೆಷ್ಟೋ ಕೆಟ್ಟ ಘಟನೆಗಳು ಕಡಿಮೆಯಾಗಬಹುದು, ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಬಹುದು ಎಂದರು.
ಕಾರ್ಯಾಕ್ರಮಾಧಿಕಾರಿ ಡಾ. ಅನುರಾಧಾ ಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದ ಬದಲಾವಣೆಯುವ ಮನಸ್ಸಿನಿಂದ ಸಾಧ್ಯ. ಜನರ ಜೊತೆ ಒಳ್ಳೆಯ ರೀತಿಯಲ್ಲಿ ಬೆರೆತಾಗ ಪರಸ್ಪರ ಸದ್ಭಾವನೆ ಮೂಡುತ್ತದೆ. ಯಾವುದು ಸರಿಯಾವುದು ತಪ್ಪುಎಂಬುದನ್ನು ಅರ್ಥೈಸಿಕೊಳ್ಳಬಲ್ಲ ಸಾಮರ್ಥ್ಯವಿರುವಯುವ ಮನಸ್ಸು ಸೌಹಾರ್ದತಾ ಸಮಾಜವನ್ನುಕಟ್ಟುವಂತಾಗಲಿ. ಸದ್ಭಾವನೆಯ ಮೂಲಕ, ಇನ್ನೊಬ್ಬರನ್ನು ಪ್ರೀತಿಸುವ, ಗೌರವಿಸುವ ಮೂಲಕ ಮಾನವೀಯ ಸಮಾಜದ ನಿರ್ಮಾಣವಾಗಲಿ ಎನ್ನುವ ನಿಟ್ಟಿನಲ್ಲಿಇಂತಹ ಕಾರ್ಯಕ್ರಮವನ್ನು ಆಯೋಜಿದ್ದೇವೆ ಎಂದರು.
ಘಟಕ ನಾಯಕರುಗಳಾದ ಭುವನ್ ಪಿ ಹಾಗೂ ಕುಮುದಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಚನಾ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ತ್ರಿಶಾಲಿ ಸ್ವಾಗತಿಸಿ, ಅರ್ಪಣಾ ವಂದಿಸಿದರು. ಮೌನವಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.