ಅಗಲಿದ ಪತ್ರಕರ್ತ ರವಿರಾಜ್ ವಳಲಂಬೆಯವರಿಗೆ ಸುಳ್ಯದ ಪತ್ರಕರ್ತರ ಶ್ರದ್ಧಾಂಜಲಿ

Advt_Headding_Middle
Advt_Headding_Middle

ನಿನ್ನೆ ರಾತ್ರಿ ನಿಧನರಾದ ಪತ್ರಕರ್ತ ರವಿರಾಜ್ ವಳಲಂಬೆಯವರಿಗೆ ಸುಳ್ಯದ ಪತ್ರಕರ್ತರು ಪ್ರೆಸ್ ಕ್ಲಬ್‌ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾಧ್ಯಕ್ಷ ಹರೀಶ್ ಬಂಟ್ವಾಳ್, ತಾಲೂಕು ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಗಂಗಾಧರ ಕಲ್ಲಪಳ್ಳಿ, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ದುರ್ಗಾಕುಮಾರ್ ನಾಯರ್‌ಕೆರೆ, ನಿರ್ದೇಶಕ ಕಿರಣ್ ಪ್ರಸಾದ್ ಕುಂಡಡ್ಕ, ಸಾಮಾಜಿಕ ಚಿಂತಕ ಎಂ.ಬಿ. ಸದಾಶಿವ ಮಾತನಾಡಿ ರವಿರಾಜ್ ವಳಲಂಬೆಯವರ ಗುಣಗಾನ ಗೈದರು.

ಪತ್ರಕರ್ತರಾದ ಗಂಗಾಧರ ಮಟ್ಟಿ, ಗಿರೀಶ್ ಅಡ್ಪಂಗಾಯ, ವಿಶ್ವನಾಥ ಮೋಟುಕಾನ, ಲೋಕೇಶ್ ಗುಡ್ಡೆಮನೆ, ಪದ್ಮನಾಭ ಮುಂಡೋಕಜೆ, ಶ್ರೀಧರ್ ಕಜೆಗದ್ದೆ, ಯಶ್ವಿತ್ ಕಾಳಂಮನೆ, ಪ್ರಜ್ಞಾ ಎಸ್.ನಾರಾಯಣ್ ಅಚ್ರಪ್ಪಾಡಿ , ಸಿ.ಐ.ಟಿ.ಯು. ಅಧ್ಯಕ್ಷ ಕೆ.ಪಿ. ಜಾನಿ, ನಂದರಾಜ್ ಸಂಕೇಶ ಮೊದಲಾದವರು ಈ ಸಂದರ್ಭದಲ್ಲಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.