Breaking News

ಪಂಜ ಕಾಲೇಜಿನಲ್ಲಿ ಮಿಂಚಿನ ನೋಂದಣಿ

Advt_Headding_Middle
Advt_Headding_Middle


ಪಂಜ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ ಗೊಳಿಸುವ ಬಗ್ಗೆ ಮಿಂಚಿನ ನೋಂದಣಿ ಕಾರ್ಯಕ್ರಮ ನಡೆಯಿತು. ಸುಳ್ಯ ತಹಶೀಲ್ದಾರರಾದ ಎನ್. ಎ. ಕು೦ಞ ಅಹಮದ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ವೇದಿಕೆಯಲ್ಲಿ ಪ್ರಭಾರ ಪ್ರಿನ್ಸಿಪಾಲ್ ವೆಂಕಪ್ಪ ಗೌಡ, ಮುಖ್ಯೋಪಾಧ್ಯಾಯರಾದ ಶಶಿಧರ. ಟಿ.ಪಿ., ಪಂಜ ನಾಡಕಚೇರಿಯ ಪ್ರಭಾರ ಉಪ ತಹಶೀಲ್ದಾರರಾದ .ಎಂ .ಆರ್. ಚಂದ್ರಕಾಂತ್, ಪಂಜ ಹೋಬಳಿಯ ಕಂದಾಯ ನಿರೀಕ್ಷಕರಾದ. ಎಂ.ಎಲ್. ಶಂಕರ ರವರು ವೇದಿಕೆಯಲ್ಲಿದ್ದರು. ಶಿಕ್ಷಕಿ ಶ್ರೀಮತಿ ಭವ್ಯ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಕಚೇರಿಯ ಭೂಮಿ ಶಾಖೆಯ ಪ್ರಭಾರ ಕಂದಾಯ ನಿರೀಕ್ಷಕರಾದ ಹರೀಶ್ ಕುಮಾರ್, ಶಿಕ್ಷಕರುಗಳಾದ ಮಹಾಬಲ ಕುಳ, ಪುರಂದರ, ಶ್ರೀಮತಿ ದಿವ್ಯ, ಚಿದಾನಂದ, ಮೋನಪ್ಪ ಗೌಡ ಇವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗ್ರಾಮ ಸಹಾಯಕರಾದ ಅಣ್ಣು ಹಾಗೂ ದೀಕ್ಷಿತ್ ಇವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.