HomePage_Banner
HomePage_Banner

ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವ : ಉತ್ಸವ ಬಲಿ ಹೊರಟು ಪಟ್ಟಣ ಸವಾರಿ

ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವ ಪ್ರಯುಕ್ತ ಶ್ರೀ ದೇವರ ಉತ್ಸವ ಬಲಿ ಮತ್ತು ಪಟ್ಟಣ ಸವಾರಿ ಜ.09 ರಂದು ರಾತ್ರಿ ನಡೆಯಿತು.

ವಿವೇಕಾನಂದ ವೃತ್ತ,ಹಳೆಗೇಟು,ಹೊಸಗದ್ದೆ ಹಳೆಗೇಟು ಕಟ್ಟೆ,ಅಮೃತಭವನ,ರಾಮಮಂದಿರ ,ಜಟ್ಟಿಪಳ್ಳ ದಲ್ಲಿ ಶ್ರೀ ದೇವರ ಕಟ್ಟೆಪೂಜೆಗಳು ನಡೆದವು.

ಕಟ್ಟೆಪೂಜೆಗಳು ನಡೆಯುವಲ್ಲಿ ಅಲ್ಲಿಯ ಸ್ಥಳೀಯರು ಕಟ್ಟೆಗಳನ್ನು ವಿದ್ಯುತ್ ದೀಪಗಳಿಂದ ಮತ್ತು ತೋರಣಗಳಿಂದ ಶೃಂಗರಿಸಿದ್ದರು,ಕೆಲವು ಕಡೆಗಳಲ್ಲಿ ಸುಡುಮದ್ದಿನ ವ್ಯವಸ್ಥೆ ಗಳನ್ನೂ ಮಾಡಿದ್ದರು.ಪಟ್ಟಣ ಸವಾರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.

ಜ.10 ರಂದು ಬೆಳಿಗ್ಗೆ ಅಜ್ಜಾವರ ಶ್ರೀ ಶಂಕರ ಭಾರತೀ ವೇದ ಪಾಠ ಶಾಲಾ ವಿದ್ಯಾರ್ಥಿಗಳಿಂದ ವೇದ ಪಾರಾಯಣ ನಡೆಯಲಿದೆ.

ರಾತ್ರಿ ಮಿತ್ತೂರು ದೈವಗಳ ಭಂಡಾರ ಬರಲಿದೆ.ನಂತರ ಕಾನತ್ತಿಲ ದೈವಗಳ ಭಂಡಾರ ಬರಲಿದೆ.ಬಳಿಕ ವಾಲಸಿರಿ ಉತ್ಸವ ನಡೆಯಲಿದೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.