Breaking News

ಪೆರಾಜೆ : ಜ್ಯೋತಿ ಪ್ರೌಢಶಾಲೆಯಲ್ಲಿ ಪ್ರತಿಭಾ ದಿನಾಚರಣೆ

Advt_Headding_Middle
Advt_Headding_Middle

ಪೆರಾಜೆ ಜ್ಯೋತಿ ಪ್ರೌಢಶಾಲೆಯಲ್ಲಿ ಪ್ರತಿಭಾ ದಿನಾಚರಣೆ ನಡೆಯಿತು. ಸರ್ಕಾರಿ ಪ್ರೌಢಶಾಲೆ ಏಲಿಮಲೆ ಮುಖ್ಯ ಶಿಕ್ಷಕ ರೂ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದ ಸಹಾಯಕ ಕಾರ್ಯನಿರ್ವಹಣಾಧಿಕಾರಿಗಳಾದ ಚಂದ್ರಶೇಖರ ಪೇರಾಲು ಮುಖ್ಯ ಭಾಷಣಕಾರಾಗಿ ಭಾಗವಹಿಸಿದ್ದರು.

ಅಧ್ಯಕ್ಷ ತೆಯನ್ನು ಸಂಘದ ಅಧ್ಯಕ್ಷ ರಾದ ಡಾ. ಜ್ಞಾನೇಶ್ ಎನ್.ಎ., ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಸದಸ್ಯ ರಾದ ನಾಗೇಶ್ ಕುಂದಲ್ಪಾಡಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷ್ಮಿ ಧರಣಿಧರ, ರೋಟರಿ ಕ್ಲಬ್ ಅಧ್ಯಕ್ಷ ರಾದ ಡಾ. ಪುರುಷೋತ್ತಮ ಹಿ.ವಿ.ಸಂಘದ ಅಧ್ಯಕ್ಷ ರಾದ ಉದಯ ಚಂದ್ರ ಕುಂಬಳಚೆರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ನಂಜಪ್ಪ ನಿಡ್ಯಮಲೆ ಭಾಗವಹಿಸಿದ್ದರು.
ಶಾಲಾ ಸಂಚಾಲಕ ರಾದ ಹರಿಶ್ಚಂದ್ರ ಮುಡ್ಕಜೆ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕ ರಾದ ದೊಡ್ಡಣ್ಣ ಬರೆಮೆಲು ವರದಿ ವಾಚಿಸಿದರು. ಈ ಸಂದರ್ಭದಲ್ಲಿ ಪ್ರೌಢಶಾಲೆ ಗೆ ರೋಟರಿ ಕ್ಲಬ್ ವತಿಯಿಂದ ಕಲರ್ ಪ್ರಿಂಟರ್ ನೀಡಿದ ಡಾ. ಪುರುಷೋತ್ತಮ ಹಾಗೂ ತಾಲೂಕು ಕ್ರೀಡಾ ಕೂಟ ಕ್ಕೆ ನೀಡಿದ ಸಹಕಾರಕಾಗಿ ಚಂದ್ರಶೇಖರ ಪೆರಾಲುರನ್ನು ಗೌರವಿಸಲಾಯಿತು. ಶಿಕ್ಷಕ ವೇಣು ಗೋಪಾಲ್‌ರವರು ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರ ಪಟ್ಟಿ ಓದಿದರು. ಉದಯ ಚಂದ್ರ ವಂದಿಸಿದರು. ಶಿಕ್ಷಕ ಸುರೇಶ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.