HomePage_Banner
HomePage_Banner

ಐನೆಕಿದುವಿನಲ್ಲಿ ಸಂಭ್ರಮಿಸಿದ ಹಿರಿಯರ ಕ್ರೀಡಾಕೂಟ

ಸುಳ್ಯ ತಾಲ್ಲೂಕು ಹಿರಿಯರ ಕ್ರೀಡಾ ಸಂಘ ಪಂಜ, ಸಂಘಟನಾ ಸಮಿತಿ ಹಿರಿಯರ ಕ್ರೀಡಾಕೂಟ ಐನೆಕಿದು, ನಿಸರ್ಗ ಯುವಕ ಮಂಡಲ ಐನೆಕಿದು ಇವುಗಳ ಜಂಟಿ ಆಶ್ರಯದಲ್ಲಿ. ದಿ। ಶ್ರೀ ಪಡ್ಡಂಬೈಲು ವೆಂಕಟ್ರಮಣ ಗೌಡ ಸ್ಮರಣಾರ್ಥ ಕೆಲ ಸಂಘಟನೆಗಳ ಸಹಯೋಗದೊಂದಿಗೆ ಜ.5 ರಂದು 9 ನೇ ಹಿರಿಯರ ಕ್ರೀಡಾಕೂಟ 2020 ಸಂಭ್ರಮದಿಂದ ನಡೆಯಿತು.

 ಕ್ರೀಡಾಕೂಟದಲ್ಲಿ ಅತ್ಯಂತ ಹಿರಿಯರು ಭಾಗವಹಿಸಿ ಕ್ರೀಡಾಕೂಟ ಕಳೆಗಟ್ಟಿತು. ಕ್ರೀಡಾಕೂಟದಲ್ಲಿ ಕೊಲ್ಲಮೊಗ್ರುವಿನ 83 ವರ್ಷದ ನಾರಾಯಣಯ್ಯ ಕಟ್ಟ 5 ಕಿ.ಮೀ ನಡಿಗೆ ಹಾಗೂ ಓಟದಲ್ಲಿ ಭಾಗವಹಿಸಿ ಗಮನ ಸೆಳೆದರು. 75 ಹರೆಯದ ಐನೆಕಿದು ಗ್ರಾಮದ ದೇಜಮ್ಮ ಹಾಗೂ ಹರಿಣಾಕ್ಷಿ ಬಹುಮಾನ ಗಿಟ್ಟಿಸಿದರು. ಬಾಳುಗೋಡು ಗ್ರಾಮದ 70 ರ ಹರೆಯದ ಬಾಲಣ್ಣ ಗೌಡ ದಂಪತಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಬಹುಮಾನ ಪಡೆದರು. ಕ್ರೀಡಾಕೂಟದಲ್ಲಿ ಬೆಳಗ್ಗಿನ ಉಪಹಾರಕ್ಕೆ ದೋಸೆ, ಚಟ್ನಿ ಯನ್ನು ಊರವರೇ ಮನೆಯಿಂದ ಮಾಡಿ ತಂದರು. ಮಧ್ಯಾಹ್ನ ಭೋಜನ ವ್ಯವಸ್ಥೆಗೆ ಊರಲ್ಲೇ ಬೆಳೆಸಿದ ಕುಚ್ಲಕ್ಕಿ ಗಂಜಿ ಊಟ, ಚಟ್ನಿ, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ಕ್ರೀಡಾಕೂಟದ ಖರ್ಚುವೆಚ್ಚವನ್ನು ಊರಿನವರಿಂದ ಸಂಗ್ರಹಿಸಿದೆ, ಹೊರ ಗ್ರಾಮದವರಿಂದ ಸಂಗ್ರಹಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.